ಮಂಜೇಶ್ವರ: ವರ್ಕಾಡಿಯ ಯೇಸುಕ್ರಿಸ್ತರ ತಿರುಹೃದಯ ದೇವಾಲಯದ ಫ್ರೆಂಡ್ಸ್ ವರ್ಕಾಡಿ ಆಟ್ರ್ಸ್ ಏಂಡ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಈಸ್ಟರ್ ಸೌಹಾರ್ದ ಸಂಭ್ರಮ ಮತ್ತು ಫ್ರೆಂಡ್ಸ್ ವರ್ಕಾಡಿಯ ಒಂದನೇ ವಾರ್ಷಿಕೋತ್ಸವ ಏ. 20ರಂದು ಸಂಜೆ 6.30ಕ್ಕೆ ವರ್ಕಾಡಿ ಇಗರ್ಜಿ ವಠಾರದಲ್ಲಿ ಜರುಗಲಿದೆ. ಇಗರ್ಜಿ ಧರ್ಮಗುರು ವಂದನೀಯ ಬಾಸಿಲ್ ವಾಸ್ ಅದ್ಯಕ್ಷತೆ ವಹಿಸುವರು.
ಉದ್ಯವರ ಮಾಡ ಕ್ಷೇತ್ರದ ಅಣ್ಣ ದಐವ ಪಾತ್ರಿ ರಾಜು ಬೆಳ್ಚಪ್ಪಾಡ, ಜುಮಾ ಮಸೀದಿ ಧರ್ಮಗುರು ಜಾಫರ್ ಸ್ವಾದಿಕ್ ಸಅದಿ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯುವುದು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಂಗಳೂರು ಲಕುಮಿ ತಂಡದ ಕುಸಾಲ್ದ ಕಲಾವಿರು ಅವರಿಂದ 'ಒರಿಯಾಂಡಲಾ ಸರಿಬೋಡು' ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳುವುದು.