ಕಾಸರಗೋಡು: ತಮಿಳುನಾಡು ಮೂಲದ ವ್ಯಕ್ತಿಯೊಬ್ಬನ ಹಲ್ಲೆಯಿಂದ ಗಂಭೀರ ಸುಟ್ಟಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಬೇಡಡ್ಕ ಮಣ್ಣಡ್ಕದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಸಿ. ರಮಿತಾ (32) ಎಂದು ಗುರುತಿಸಲಾಗಿದೆ.
ತಮಿಳುನಾಡು ಮೂಲದ ರಾಮಾಮೃತ (57) ಎಂಬಾತ ರಮಿತಾರನ್ನು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದು, ಆಸ್ಪತ್ರೆಯಲ್ಲಿ ಗಂಭೀರಾವಸ್ಥೆಯಲ್ಲಿದ್ದರು. ರಾಮಾಮೃತ ಆಕೆಯ ಅಂಗಡಿಯ ಬಳಿಯೇ ಪೀಠೋಪಕರಣ ಅಂಗಡಿ ನಡೆಸುವ ವ್ಯಕ್ತಿಯಾಗಿದ್ದಾನೆ.
ಆರೋಪಿಯನ್ನು ಬೇಡಗಂ ಪೋಲೀಸರು ಬಂಧಿಸಿದ್ದಾರೆ. ರಾಮಾಮೃತ ನಿಯಮಿತವಾಗಿ ಅಂಗಡಿಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದರಿಂದ ಆ ಮಹಿಳೆ ಕಟ್ಟಡ ಮಾಲೀಕರಿಗೆ ದೂರು ನೀಡಿದ್ದರು. ನಂತರ ಕಟ್ಟಡ ಮಾಲೀಕರು ರಾಮಾಮೃತನನ್ನು ಅಂಗಡಿಯನ್ನು ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಈ ಕೋಪದಿಂದ ರಮಿತಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.ಇದೀಗ ಆರೋಪಿಯನ್ನು ಬಂಧಿಸಲಾಗಿದೆ.