ಕಾಸರಗೋಡು: ಕಾಞಂಗಾಡು ಬ್ಲಾಕ್ ಪಂಚಾಯಿತಿಯ 2024 25 ವರ್ಷದ ಯೋಜನೆಯನ್ವಯ ಮೂರು ಪರಿಶಿಷ್ಟ ಜಾತಿಯ ಯುವ ಗುಂಪುಗಳಿಗೆ ಸಂಗೀತ ಉಪಕರಣಗಳನ್ನು ವಿತರಿಸಲಾಯಿತು. ಪರಿಶಿಷ್ಟ ಜಾತಿಗಳಲ್ಲಿ ಕಲೆ ಮತ್ತು ಸಂಸ್ಕøತಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ¸ಸಂಗೀತ ಸಲಕರಣೆಗಳ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಣಿಕಂದನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕೆ.ವಿ.ಶ್ರೀಲತಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಅಬ್ದುಲ್ ರಹಮಾನ್, ಕೆ.ಸೀತಾ, ಎಂ.ವಿಜಯನ್, ಮಡಿಕೈ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಸ್.ಪ್ರೀತಾ, ಬ್ಲಾಕ್ ಪಂಚಾಯಿತಿ ಸದಸ್ಯರಾದ ಎ.ದಾಮೋದರನ್, ಕೆ.ವಿ.ರಾಜೇಂದ್ರನ್, ಅಡ್. ಎಂ.ಕೆ.ಬಾಬುರಾಜ್, ಪುಷ್ಪಾ, ಲಕ್ಷ್ಮೀ ತಂಬಾನ್, ಶಕೀಲಾ, ಬಶೀರ್, ಪುಷ್ಪಾ, ವಿ.ಗೀತಾ, ಬ್ಲಾಕ್ ಎ.ದಾಮೋದರನ್, ಕೆ.ವಿ.ರಾಜೇಂದ್ರನ್, ಅಡ್ವ. ಎಂ.ಕೆ.ಬಾಬುರಾಜ್, ಪುಷ್ಪಾ, ಲಕ್ಷ್ಮೀ ತಂಬಾನ್, ಶಕೀಲಾ ಬಶೀರ್, ಪುಷ್ಪಾ, ವಿ.ಗೀತಾ, ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಹರಿ ಕೃಷ್ಣನ್, ಎಸ್.ಸಿ.ಡಿ.ಓ.ಪಿ.ಬಿ.ಬಶೀರ್ ಮೊದಲಾದವರು ಉಪಸ್ಥಿತರಿದ್ದರು. ಪುಲ್ಲೂರು ಪೆರಿಯ ಗ್ರಾ.ಪಂ.ನ ನವಜಜ್ಯೋತಿ, ಉದುಮದ ಕೈಮಾ ಹಾಗೂ ಪಳ್ಳಿಕ್ಕೆರೆಯ ನಟನಾ ಕೈರಳಿ ಅವರಿಗೆ ಸಂಗೀತ ಪರಿಕರಗಳನ್ನು ನೀಡಲಾಯಿತು. ಅವೆ ಪ್ರತಿ ಚೆಂಡ, ಎರಡು ಬೀಕ್ ಚೆಂಡ. ಮೂರು ಎಲೆಯ ಡೋಲು ಇತ್ಯಾದಿಗಳನ್ನು ವಿತರಿಸಲಾಯಿತು. ಕಳೆದ ವರ್ಷ ನಾಲ್ಕು ಗುಂ ಗುಂಪುಗಳಿಗೆ ಸಂಗೀತೋಪಕರಣ ವಿತರಿಸಲಾಯಿತು.