ಕಾಸರಗೋಡು: ಕೇರಳ ಕಾನೂನು ಸೇವಾ ಪ್ರಾಧಿಕಾರದ ಪ್ಯಾಮಿಲಿ ಕೌನ್ಸಿಲಿಂಗ್ ಕಾರ್ಯಕ್ರಮದನ್ವಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಫ್ಯಾಮಿಲಿ ಕೌನ್ಸಿಲರ್ ನೇಮಕಾತಿ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ.
ಸೈಕೋಲಜಿಯಲ್ಲಿ ಬಿ.ಎ ಯಾ ಬಿ.ಎಸ್.ಸಿ ಪದವಿ (ಪೂರ್ಣ ಸಮಯ), ಸೈಕೋಲಜಿಯಲ್ಲಿ ಎಂ.ಎ ಯಾ ಎಂಎಸ್ಸಿ ಪದವಿ (ಪೂರ್ಣ ಸಮಯ),ಕ್ಲಿನಿಕಲ್ ಯಾ ಕೌನ್ಸಿಲಿಂಗ್ ಅಥವಾ ಅಪ್ಲೈಡ್ ಸೈಕಾಲಜಿ ಅಥವಾ ಸೋಶಿಯಲ್ ಮಾಸ್ಟರ್ಸ್ ಸ್ನಾತಕೋತ್ತರ ಪದವಿ (ಪೂರ್ಣ ಸಮಯ)ಹೊಂದಿದವರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ಯಾಮಿಲಿ ಕೌನ್ಸಿಲಿಂಗ್ ನಲ್ಲಿ ಪಿಜಿ/ಡಿಪೆÇ್ಲಮಾ ಪಡೆದವರಿಗೆ ಆದ್ಯತೆ ನೀಡಲಾಗುವುದು. ಮಾನಸಿಕ ಆರೋಗ್ಯ ಸೇವೆಗಳನ್ನು ಒದಗಿಸುವ ಆಸ್ಪತ್ರೆ ಅಥವಾ ಕ್ಲಿನಿಕ್‍ನಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಕೆಲಸದ ಅನುಭವ ಹೊಂದಿರಬೇಕು. ಪ್ಯಾಮಿಲಿ ಕೌನ್ಸಿಲಿಂಗ್‍ನಲ್ಲಿ ಕೆಲಸದ ಅನುಭವಕ್ಕೆ ಆದ್ಯತೆ ನೀಡಲಾಗುತ್ತದೆ. 30 ವರ್ಷ ಮೇಲ್ಪಟ್ಟವರಿಗೆ ಅರ್ಜಿ ಸಲ್ಲಿಸಬಹುದು. ಕೇರಳ ಕಾನೂನು ಸೇವೆಗಳ ಪ್ರಾಧಿಕಾರ ಎರ್ನಾಕುಳದಿಂದ ಆಯ್ಕೆ ನಡೆಸಲಾಗುವುದು. ದಿನವೊಂದಕ್ಕೆ 1500 ರೂ ಗೌರವಧನ ನೀಡಲಾಗುವುದು. ಫೆÇೀಟೋ ಸಹಿತ ಇರುವ ಬಯೋಡೇಟಾ, ಶೈಕ್ಷಣಿಕ ಅರ್ಹತೆ ಮತ್ತು ಕೆಲಸದ ಅನುಭವವನ್ನು ಸಾಬೀತುಪಡಿಸುವ ಪ್ರಮಾಣಪತ್ರದ ಪ್ರತಿಗಳ ಸಹಿತ ಎಪ್ರಿಲ್ 7ರ ಮೊದಲು ಕಾರ್ಯದರ್ಶಿ/ಸಿವಿಲ್ ನ್ಯಾಯಾಧೀಶರು (ಹಿರಿಯ ವಿಭಾಗ) ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಲಯ ಸಮುಚ್ಚಯ, ವಿದ್ಯಾನಗರ ಕಾಸರಗೋಡು -671123 ಎಂಬ ಮೇಲ್ ವಿಳಾಸಕ್ಕೆ ಕಳುಹಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994256189)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.