ಇಂಫಾಲ್: ಬಿಜೆಪಿ ಮುಖಂಡ ಎಂ.ಡಿ ಅಸ್ಕರ್ ಅಲಿ ಅವರ ಮನೆಗೆ ಉದ್ರಿಕ್ತರ ಗುಂಪೊಂದು ಭಾನುವಾರ ಬೆಂಕಿ ಹಚ್ಚಿದ ಬೆನ್ನಲ್ಲೇ ಲಿಲೊಂಗ್ ವಿಧಾನಸಭಾ ಕ್ಷೇತ್ರದಾದ್ಯಂತ ಸೋಮವಾರ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಬೆಂಬಲಿಸುವುದಾಗಿ ಅಲಿ ಅವರು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.