ಕಾಸರಗೋಡು: ಭಾರತೀಯ ವಿಚಾರಕೇಂದ್ರ ಕಾಸರಗೋಡು ಜಿಲ್ಲಾ ವಾರ್ಷಿಕ ಸಮ್ಮೇಳನ ಕಾಸರಗೋಡಿನಲ್ಲಿ ಜರುಗಿತು. ಚಿನ್ಮಯ ಮಿಷನ್ ಕೇರಳ ರಾಜ್ಯ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಸಮಾರಂಭ ಉದ್ಘಾಟಿಸಿದರು.
ನಮ್ಮ ಸಂಸ್ಕøತಿಯಲ್ಲಿ ಉಂಟಾಗಿರುವ ವಿಕೃತಿಯನ್ನು ಹೋಗಲಾಡಿಸಲು ಚಿನ್ಮಯ್ ಮಿಷನ್ ಸೇರಿದಂತೆ ಸನ್ಯಾಸಿಗಳ ನೇತೃತ್ವದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಭಾರತೀಯ ವಿಚಾರಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸ ನಡೆದುಬರಬೇಕಾಗಿದೆ. ಭಾರತೀಯ ಚಿಂತನೆಗಳ ಮೂಲಕ ಕೇರಳ ಸಂಸ್ಕøತಿಯ ಸ್ಥಿರತೆಯ ಮರುಸ್ಥಾಪನೆ ಸಾಧ್ಯವಾಗಬೇಕು. ಕೇವಲ ಅಂಕಗಳ ಆಧಾರದ ಮೇಲೆ ಶಿಕ್ಷಣದಲ್ಲಿ ಮೌಲ್ಯಮಾಪನ ನಡೆಸುವುದು ಬಿಟ್ಟು ಮಕ್ಕಳಲ್ಲಿ ಮಾನವೀಯತೆಯ ಮೌಲ್ಯಮಾಪನ ನಡೆಸಬೇಕಾಗಿದೆ ಎಂದು ತಿಳಿಸಿದರು.
ಭಾರತೀಯ ವಿಚಾರಕೇಂದ್ರದ ಜಿಲ್ಲಾಧ್ಯಕ್ಷ ಮುರಳೀಧರನ್ ಪಾಲಮಂಗಲಂ ಅಧ್ಯಕ್ಷತೆ ವಹಿಸಿದ್ದರು. ಜೆ.ನಂದ ಕುಮಾರ್, ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಶ್ರೀಧರನ್ ಪುದುಮನ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಡಾ.ಕೆ.ಎ.ಶಿವಪ್ರಸಾದ್ ಸ್ವಾಗತಿಸಿದರು. ಪಿ.ನಾರಾಯಣನ್ ವಂದಿಸಿದರು.