HEALTH TIPS

ಥಾಂಗ್ಜಿಂಗ್‌ ಬೆಟ್ಟ ಹತ್ತದಿರಿ: ಮೈತೇಯಿಗಳಿಗೆ ಕುಕಿ-ಜೋ ಸಂಘಟನೆಗಳ ಎಚ್ಚರಿಕೆ

ಇಂಫಾಲ್‌: ಮಣಿಪುರದ ಚುರಾಚಾಂದಪುರ ಜಿಲ್ಲೆಯಲ್ಲಿರುವ ಥಾಂಗ್ಜಿಂಗ್‌ ಬೆಟ್ಟ ಹತ್ತದಂತೆ ಕುಕಿ-ಜೋ ಸಂಘಟನೆಗಳು ಮೈತೇಯಿ ಸಮುದಾಯಕ್ಕೆ ಎಚ್ಚರಿಕೆ ನೀಡಿವೆ.

'ಮೈತೇಯಿಗಳು ಪವಿತ್ರ ಬೆಟ್ಟ ಏರುವ ಪ್ರಯತ್ನ ನಡೆಸಿದರೆ, ಅದನ್ನು ನಮಗೊಡ್ಡುವ ನೇರ ಸವಾಲು ಎಂದೇ ಪರಿಗಣಿಸಲಾಗುವುದು.

ನಮ್ಮೆಲ್ಲ ಶಕ್ತಿ ಬಳಸಿ ತಡೆಯುತ್ತೇವೆ' ಎಂದು ಆರು ಕುಕಿ- ಜೋ ಗುಂಪುಗಳು ಪ್ರಕಟಣೆಯಲ್ಲಿ ತಿಳಿಸಿವೆ.

ಏಪ್ರಿಲ್‌ ತಿಂಗಳಲ್ಲಿ ತಮ್ಮ ಪವಿತ್ರ ಸ್ಥಳವಾದ ಥಾಂಗ್ಜಿಂಗ್‌ ಬೆಟ್ಟ ಶ್ರೇಣಿಯಲ್ಲಿರುವ ಚಿಂಗಾ ಕಾಬಾಗೆ ಮೈತೇಯಿ ಜನರು ಭೇಟಿ ನೀಡಲಿದ್ದಾರೆ ಎಂಬ ಊಹಾಪೋಹಗಳಿದ್ದು, ಕುಕಿ ಸಂಘಟನೆಗಳು ಇದನ್ನು ಖಂಡಿಸಿ ಎಚ್ಚರಿಕೆ ನೀಡಿವೆ.

'ಕೇಂದ್ರ ಸರ್ಕಾರ ಹಾಗೂ ಕುಕಿ- ಜೋ ಸಮುದಾಯದ ನಡುವಿನ ಮಾತುಕತೆ ಫಲಪ್ರದಾಯಕವಾಗಿಲ್ಲ. ಅದಕ್ಕೂ ಮುನ್ನವೇ ಕುಕಿ- ಜೋ ನೆಲವನ್ನು ಪ್ರವೇಶಿಸಲು ಮೈತೇಯಿಗಳಿಗೆ ಯಾವುದೇ ನ್ಯಾಯಾಧಿಕಾರವಿಲ್ಲ' ಎಂದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries