ಕೋಝಿಕ್ಕೋಡ್: ಮೋಹನ್ ಲಾಲ್ ಮಿಲಿಟರಿ ಗೌರವದ ಘನತೆಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕೋಝಿಕ್ಕೋಡ್ ಮೂಲದ ಮಿಥುನ್ ವಿಜಯಕುಮಾರ್ ರಕ್ಷಣಾ ಸಚಿವಾಲಯಕ್ಕೆ ದೂರು ನೀಡಿದ್ದಾರೆ.
ಪ್ರಾದೇಶಿಕ ಸೇನೆಯಲ್ಲಿ ಅವರ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯನ್ನು ಪರಿಶೀಲಿಸಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಎಂಬುರಾನ್‍ನಲ್ಲಿ ಮೋಹನ್ ಲಾಲ್ ನಿರ್ವಹಿಸಿದ ಪಾತ್ರವು ಅವರು ಹೊಂದಿರುವ ಸ್ಥಾನಕ್ಕೆ ವಿರುದ್ಧವಾಗಿದೆ. ರಾಜಕೀಯ ಒತ್ತಡದ ಮೂಲಕ ಎನ್.ಐ.ಎ. ಮೇಲೆ ಪ್ರಭಾವ ಬೀರಬಹುದು ಎಂದು ಚಿತ್ರವು ಸೂಚಿಸುತ್ತದೆ. ಕೀರ್ತಿ ಚಕ್ರವು ಭಾರತೀಯ ಸೈನಿಕರನ್ನು ಘನತೆಯಿಂದ ಚಿತ್ರಿಸುವ ಚಿತ್ರವಾಗಿತ್ತು ಮತ್ತು ಅದರಲ್ಲಿ ನಟಿಸಿದ ನಂತರ ಮೋಹನ್ ಲಾಲ್ ಗೌರವ ಪ್ರಶಸ್ತಿಯನ್ನು ಪಡೆದಿದ್ದÀರು. ಆ ಪಾತ್ರವು ದೇಶದ ಯುವಜನರ ಮೇಲೆ ಹೆಚ್ಚಿನ ಪ್ರಭಾವ ಬೀರಿತು ಎಂದು ದೂರಿನಲ್ಲಿ ಹೇಳಲಾಗಿದೆ.