ಇತ್ತೀಚಿನ ಯುವ ಪೀಳಿಗೆಯ ಜನರು ಹೆಚ್ಚಾಗಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಬಳಕೆ ಮಾಡುತ್ತಿದ್ದಾರೆ. ಆದರೆ ಇಷ್ಟು ದಿನ ಜನರು ಉಚಿತವಾಗಿ ಮೊಬೈಲ್ಗಳಲ್ಲಿ ಈ ಅಪ್ಲಿಕೇಷನ್ಗಳನ್ನ ಬಳಕೆ ಮಾಡುತ್ತಿದ್ದರು, ಈಗಲೂ ಸಹ ಉಚಿತವಾಗಿಯೇ ನಿತ್ಯ ಬಳಕೆ ಮಾಡುತ್ತಿದ್ದಾರೆ.
ಆದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಈ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲು ಇನ್ನುಮುಂದೆ ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ಮೆಟಾ ಕಂಪನಿಯು ಯುಕೆಯಲ್ಲಿ ವಾಸಿಸುವ ಬಳಕೆದಾರರಿಗೆ ಚಂದಾದಾರಿಕೆಯನ್ನು ಪರಿಚಯಿಸಲು ಪ್ಲಾನ್ ಮಾಡಿಕೊಂಡಿದೆ. ಈ ಹೊಸ ನಿಯಮ ಜಾಹೀರಾತುಗಳನ್ನು ನೋಡಲು ಇಷ್ಟಪಡದ ಬಳಕೆದಾರರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಮೆಟಾ ಈಗಾಗಲೇ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಕೆದಾರರಿಗೆ ಯುರೋಪಿಯನ್ ದೇಶದಲ್ಲಿ ಜಾಹೀರಾತು-ಮುಕ್ತ ಸದಸ್ಯತ್ವವನ್ನು ನೀಡಲಾಗಿದೆ. ಇದೀಗ ಈ ಕಂಪನಿಯು ಯುಕೆಯಲ್ಲಿ ಜಾಹೀರಾತು-ಮುಕ್ತ ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ.
ಮೆಟಾ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು?
ಕಾನೂನು ಸಮಸ್ಯೆಗಳನ್ನು ತೆಗಟ್ಟಲು ಮೆಟಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಕಂಪನಿಯು ಯುಕೆಯಲ್ಲಿ ವಾಸಿಸುವ ವ್ಯಕ್ತಿಗಳಿಗೆ ವೈಯಕ್ತಿಕ ಜಾಹೀರಾತುಗಳನ್ನು ತೋರಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದ್ದು, ಈ ಪ್ರಕರಣದ ವಿಚಾರಣೆ ಲಂಡನ್ ಹೈಕೋರ್ಟ್‌ನಲ್ಲಿ ನಡೆದ ಬಳಿಕ ಈ ಸಮಸ್ಯೆಯನ್ನು ಹೋಗಲಾಡಿಸುವುದಾಗಿ META ಒಪ್ಪಿಕೊಂಡಿತು.
ಮಾನವ ಹಕ್ಕುಗಳ ಕಾರ್ಯಕರ್ತೆಯಾಗಿರುವ ತಾನಿಯಾ ಓ ಕ್ಯಾರೆಲ್ 2022 ರಲ್ಲಿ ಮೆಟಾ ವಿರುದ್ಧ 1.5 ಟ್ರಿಲಿಯನ್ ಡಾಲರ್ (ಸುಮಾರು 12.8 ಲಕ್ಷ ಕೋಟಿ ರೂ.) ಮೊಕದ್ದಮೆ ಹೂಡಿದ್ದರು. ಮೆಟಾ ತನ್ನ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಯುಕೆ ಡೇಟಾ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ತಾನಿಯಾ ಆರೋಪಿಸಿದ್ದರು. ಅವರ ಮಾಹಿತಿಯನ್ನು ಕದ್ದು ಜಾಹೀರಾತುಗಳನ್ನು ತೋರಿಸಲಾಗಿದೆ ಎಂದು ಯುಕೆಯ ದತ್ತಾಂಶ ಸಂರಕ್ಷಣಾ ಪ್ರಾಧಿಕಾರವು ತಾನ್ಯಾ ಅವರ ಪ್ರಕರಣವನ್ನು ಬೆಂಬಲಿಸಿತು ಮತ್ತು ಆನ್‌ಲೈನ್ ಉದ್ದೇಶಿತ ಜಾಹೀರಾತುಗಳ ವಿರುದ್ಧ ಹೋಗಲು ಬಯಸುವವರನ್ನು ಬೆಂಬಲಿಸುವುದಾಗಿ ಒಪ್ಪಿಕೊಂಡಿತು.
ಮೆಟಾ 2023 ರಲ್ಲಿ ಯುರೋಪಿಯನ್ ಒಕ್ಕೂಟದಲ್ಲಿ ಮುಕ್ತ ಚಂದಾದಾರಿಕೆ ಸೇವೆಯನ್ನು ಆರಂಭಿಸಿತು. ಈ ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ (GDPR) ಮತ್ತು ಡಿಜಿಟಲ್ ಮಾರುಕಟ್ಟೆ ಕಾಯ್ದೆ (DMA) ನಂತಹ ನಿಯಮಗಳನ್ನು ಅನುಸರಿಸುವುದು ಈ ಸೇವೆಯನ್ನು ತರುವ ಹಿಂದಿನ ಮೆಟಾದ ಏಕೈಕ ಉದ್ದೇಶವಾಗಿತ್ತು. 2024 ರಲ್ಲಿ ಮೆಟಾ ಚಂದಾದಾರಿಕೆ ಸೇವಾ ಶುಲ್ಕವನ್ನು ಶೇಕಡಾ 40 ರಷ್ಟು ಕಡಿಮೆ ಮಾಡಿತು. ವೆಬ್‌ನಲ್ಲಿ ಮಾಸಿಕ ಸದಸ್ಯತ್ವ ಶುಲ್ಕವನ್ನು ಸುಮಾರು ರೂ. 554 ಮತ್ತು Android ಮೇಲಿನ ಮಾಸಿಕ ಶುಲ್ಕವನ್ನು ಸುಮಾರು ರೂ. 739 ಕ್ಕೆ ಇಳಿಸಲಾಗಿದೆ.