ಕಾಸರಗೋಡು: ಜಿಲ್ಲಾ ನೂತನ ಪೋಲೀಸ್ ವರಿಷ್ಠಾಧಿಕಾರಿಯಾಗಿ ಬಿ.ವಿ. ವಿಜಯಭಾರತ್ ರೆಡ್ಡಿ ಭಾನುವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ಹೆಡ್‍ಕ್ವಾಟ್ರಸ್‍ನ ಎಸ್.ಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಲಕೃಷ್ಣನ್ ನಾಯರ್ ಹೂಗುಚ್ಛ ನೀಡಿ, ಬಿ.ವಿ. ವಿಜಯಭಾರತ್ ರೆಡ್ಡಿ ಅವರನ್ನು ಬರಮಾಡಿಕೊಂಡರು.
2019ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಇವರು ತಿರೂವನಂತಪುರಂ ನಗರ ಸಹಾಯಕ ಪೆÇೀಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಾಸರಗೋಡು ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿಲ್ಪಾ ದೇವಯ್ಯ ಅವರನ್ನು ಬೆಂಗಳೂರಿನ ಸಿ.ಬಿ.ಐ ವಿಭಾಗ ಎಸ್.ಪಿಯಾಗಿ ವರ್ಗಾವಣೆಗೊಳಿಸಿರುವುದರಿಂದ ತೆರವಾಗಿರುವ ಸ್ಥಾನಕ್ಕೆ ಬಿ.ವಿ. ವಿಜಯಭಾರತ್ ರೆಡ್ಡಿ ಅವರನ್ನು ನೇಮಿಸಲಾಗಿದೆ.