ಬೇಸಿಗೆ ಆರಂಭಗೊಂಡಿದೆ ಎಂದರೆ ಅಲ್ಲಿ ಹಣ್ಣುಗಳಿಗೆ, ಐಸ್ ಕ್ರೀಮ್ ಹಾಗೆ ಜ್ಯೂಸ್‌ಗಳಿಗೆ ಭಾರೀ ಬೇಡಿಕೆ ಇರಲಿದೆ. ಅದರಲ್ಲೂ ಹಣ್ಣಗಳನ್ನು ಸೇವಿಸುವುದು ಬಹಳ ಉತ್ತಮ. ಬೇಸಿಗೆಯಲ್ಲಿ ದೇಹ ಹೈಡ್ರೇಟ್ ಆಗಬೇಕಾದರೆ ಹೆಚ್ಚು ನೀರಿನ ಅಂಶ ದೇಹಕ್ಕೆ ಅಗತ್ಯವಾಗಿ ಬೇಕಾಗುತ್ತದೆ. ಹೀಗಾಗಿ ಹಣ್ಣುಗಳು, ಜ್ಯೂಸ್, ನೀರು ಸೇವಿಸುತ್ತಿರುವುದು ನಮ್ಮ ದೇಹಕ್ಕೆ ಉತ್ತಮ. ಅದರಲ್ಲೂ ಬೇಸಿಗೆ ಅಂದರೆ ಅಲ್ಲಿ ಕಲ್ಲಂಗಡಿ ಹಣ್ಣಿನ ಸೀಸನ್ ಆರಂಭವಾಗುತ್ತದೆ.
ಬೇಸಿಗೆಯಲ್ಲಿ ಕಲ್ಲಂಗಡಿ ಹಾಗೂ ಮಾವಿನ ಹಣ್ಣುಗಳು ಎಲ್ಲಾ ಕಡೆ ನೋಡಲು ಸಿಗುತ್ತವೆ. ಕಲ್ಲಂಗಡಿ ಹಣ್ಣು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ನೀರಿನಾಂಶ ನೀಡಲು ನೆರವಾಗುತ್ತದೆ. ಬೇಸಿಗೆಯಲ್ಲಿ ಕಲ್ಲಂಗಡಿಗೆ ಉಪ್ಪು ಹಾಗೂ ಖಾರ ಹಾಕಿಕೊಂಡು ಸವಿಯುತ್ತಿದ್ದರೆ ಅದರ ರುಚಿಗೆ ನೀವು ಮರುಳಾಗುತ್ತೀರಿ. ಹಾಗೆ ನಿಮ್ಮ ದೇಹಕ್ಕೂ ಇದು ತಂಪು ನೀಡಲಿದೆ. ಕಲ್ಲಂಗಡಿಯಲ್ಲಿ ಬೀಟಾ ಕ್ಯಾರೋಟಿನ್ ಹೇರಳವಾಗಿ ಕಂಡುಬರುತ್ತದೆ. ಬೀಟಾ ಕ್ಯಾರೋಟಿನ್ ಕಣ್ಣುಗಳಿಗೆ ಬಹಳ ಮುಖ್ಯ, ಇದರ ಸೇವನೆಯು ಕಣ್ಣುಗಳ ಆರೋಗ್ಯ ಸುಧಾರಿಸಲಿದೆ. ವಿಟಮಿನ್ ಎ ಕೂಡ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ.
ಇನ್ನು ಒಂದು ಇಡೀ ಕಲ್ಲಂಗಡಿ ಹಣ್ಣು ತಂದು ಇಡಿಯಾಗಿ ಒಂದೇ ದಿನ ಸವಿಯಲು ಸಾಧ್ಯವಿಲ್ಲ. ಹೀಗಾಗಿ ನೀವು ಅರ್ಧ ಹಣ್ಣಣ್ಣು ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡಬಹುದು. ಹೀಗಾಗಿ ಫ್ರಿಡ್ಜ್‌ನಲ್ಲಿ ಎಷ್ಟು ದಿನಗಳ ಕಾಲ ಕಲ್ಲಂಗಡಿ ಹಣ್ಣು ಇಡಬಹುದು? ಹಾಗೆ ಇದನ್ನು ಶೇಖರಿಸಿಡುವ ಸರಿಯಾದ ಮಾರ್ಗವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಲ್ಲಂಗಡಿಯನ್ನು ನೀವು ಸುಮಾರು 1 ವಾರಗಳ ಕಾಲ ಫ್ರಿಡ್ಜ್‌ನಲ್ಲಿ ಶೇಖರಿಸಿ ಇಡಬಹುದು. ಒಂದು ವಾರದ ಬಳಿಕ ಕಲ್ಲಂಗಡಿ ತನ್ನ ರುಚಿ ಕಳೆದುಕೊಳ್ಳಲು ಆರಂಭಿಸಲಿದೆ. ಹಾಗೆ ಇಡಿಯಾದ ಹಣ್ಣನ್ನು ನೀವು ಫ್ರಿಡ್ಜ್‌ನಿಂದ ಹೊರಗೆ ಇಡಬಹುದು. ಹಾಗೆ ಅರ್ಧ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಒಂದು ಪ್ಲಾಸ್ಟಿಕ್ ಕವರ್‌ಗೆ ಹಾಕಿ ಕಟ್ಟಿ ಅದನ್ನು ಫ್ರಿಡ್ಜ್‌ನಲ್ಲಿ ಇಡಬಹುದು. ಹಾಗೆ ಇಲ್ಲವೆ ಸಣ್ಣದಾಗಿ ಕತ್ತರಿಸಿ ಬೌಲ್‌ಗೆ ಹಾಕಿ ಪ್ಲಾಸ್ಟಿಕ್ ಅನ್ನು ಸುತ್ತಿ ಡೀಪ್ ಫ್ರೀಜರ್‌ನಲ್ಲಿ ಇಡಬಹುದು.
ಇನ್ನು ಕಲ್ಲಂಗಡಿ ಹಣ್ಣು ಅತ್ಯಂತ ಸಿಹಿಯಾಗಿದೆ ಎಂದು ಹೆಚ್ಚಿನವರು ಇಷ್ಟಪಡುತ್ತಾರೆ. ಆದ್ರೆ ಎಲ್ಲರಿಗೂ ಈ ಹಣ್ಣು ವರವಾಗಿಲ್ಲ. ಅದರಲ್ಲೂ ನೀವು ಹೆಚ್ಚು ಬೊಜ್ಜು ಇರುವವರಾಗಿದ್ದರೆ ಕಲ್ಲಂಗಡಿ ಸೇವಿಸಬೇಡಿ. ರಕ್ತದಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುವ ಕಾರಣ ಹಾಗೆ ಇದು ದೇಹದ ಕ್ಯಾಲೋರಿ ಹೆಚ್ಚಿಸುವುದರಿಂದ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆ ಇರಲಿದೆ.
ಇನ್ನು ಅಸ್ತಮಾ ಸಮಸ್ಯೆ ಇರುವವರು ಕೂಡ ಕಲ್ಲಂಗಡಿ ಸೇವಿಸಬಾರದು. ಕಲ್ಲಂಗಡಿಯಲ್ಲಿನ ಅಮೈನೋ ಆಮ್ಲವು ಉಸಿರಾಟದ ಸಮಸ್ಯೆ ಹೆಚ್ಚಾಗುವಂತೆ ಮಾಡಲಿದೆ. ಹೀಗಾಗಿ ಆಸ್ತಮಾ ಇರುವವರು ವೈದ್ಯಕೀಯ ಸಲಹೆಯ ಮೇರೆಗೆ ಸೇವಿಸಬಹುದು. ಹಾಗೆ ಮಧುಮೇಹ ಇರುವವರು ಈ ಕಲ್ಲಂಗಡಿ ಸೇವನೆ ಮಾಡದೇ ಇರುವುದು ಉತ್ತಮ ಏಕೆಂದರೆ ಈ ಹಣ್ಣಿನಲ್ಲಿ ಇದರಲ್ಲಿ ನೈಸರ್ಗಿಕ ಸಕ್ಕರೆ ಅಂಶವಿರುವುದರಿಂದ, ಇದು ಹೆಚ್ಚಿನ ಗ್ಲೈಸೆಮಿಕ್ ಅಂಶ ಹೊಂದಿದೆ, ಇದು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹೆಚ್ಚಿನ ಏರಿಕೆಗೆ ಕಾರಣವಾಗಬಹುದು.
ಕೆಮ್ಮು ಶೀತ ಇದ್ದರೆ ಕಲ್ಲಂಗಡಿ ಸೇವಿಸಬೇಡಿ:
ಕೆಮ್ಮು ಅಥವಾ ಶೀತದಂತಹ ತಂಪಿನ ಸಮಸ್ಯೆಗೆ ಒಳಗಾಗಿದ್ದರೆ ಕಲ್ಲಂಗಡಿ ಹಣ್ಣನ್ನು ಸೇವಿಸಬೇಡಿ. ಕಲ್ಲಂಗಡಿ ತಂಪುಕಾರಕವಾಗಿದೆ. ಹೀಗಾಗಿ ಈ ಸಮಯದಲ್ಲಿ ಕಲ್ಲಂಗಡಿ ಸವಿದರೆ ಶೀತ, ಕೆಮ್ಮು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಕಲ್ಲಂಗಡಿ ಸೇವನೆ ಮುನ್ನ ಈ ಎಲ್ಲ ಮುನ್ನೆಚ್ಚರಿಕೆ ಅಗತ್ಯ.