HEALTH TIPS

ಪರಾ-ಅಪರಾ ಎರಡೂ ವಿದ್ಯೆಗಳನ್ನು ಯುವ ಸಮೂಹಕ್ಕೆ ದಾಟಿಸಬೇಕು-ಜೆ.ನಂದಕುಮಾರ್

ಮಧೂರು: ವೈವಿಧ್ಯಮಯ ಭಾರತ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರ ಭಾರತ. ಶ್ರೀರಾಮ, ಶ್ರೀಕೃಷ್ಣರು ಭಾರತವನ್ನು ಉದ್ದಗಲ ಜೋಡಿಸಿದ ಮಹಾತ್ಮರು. ಅಂತಹ ದೈವೀ ಪುರುಷರ ನಾಡು ಸಂಕಟಕ್ಕೊಳಗಾಗದು. ಆಗ್ಗಿದ್ದಾಗೆ ಬಂದೊದಗುವ ಸವಾಲುಗಳನ್ನು ನಿವಾರಿಸಲು ಶಕಪುರುಷರಾದಿ ಋಷಿ ಪರಂಪರೆಯ ಬೆಳಕು ನಮ್ಮ ಮೇಲಿದೆ ಎಂದು ಪ್ರಜ್ಞಾಪ್ರವಾಹ ಅಖಿಲ ಭಾರತ ಸಂಯೋಜಕ ಜೆ.ನಂದಕುಮಾರ್  ಅಭಿಪ್ರಾಯ ವ್ಯಕ್ತಪಡಿಸಿದರು.

ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಾಲಯದಲ್ಲಿ ಐತಿಹಾಸಕವಾಗಿ ನಡೆಯುತ್ತಿರುವ ಪ್ರತಿμÁ್ಠ ಅಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಶುಕ್ರವಾರ ಸಂಜೆ  ಪ್ರಧಾನ ವೇದಿಕೆಯಲ್ಲಿ ನಡೆದ ಧಾರ್ಮಿಕ  ಸಭೆಯಲ್ಲಿ ಪ್ರಧಾನ ಉಪನ್ಯಾಸ ನೀಡಿ ಅವರು ಮಾತನಾಡಿದರು.


ತ್ಯಾಗ ಮತ್ತು ಸೇವೆಗಳು ಈ ರಾಷ್ಟ್ರದ ಧೀಶಕ್ತಿ. ಜ್ಞಾನ ಅಥವಾ ಅರಿವಿಗೆ ಮಹತ್ವ ನೀಡಿದ್ದರಿಂದ ವೇದ-ಉಪನಿಷತ್ ಸಹಿತ ಮಹಾನ್ ಅರಿವಿನ ಹೆಮ್ಮರದ ಅಡಿಯಲ್ಲಿ ಬೆಳೆದ ಈ ಸಂಸ್ಕøತಿ ಎಂದಿಗೂ ಭಿನ್ನತೆಯನ್ನು ಪೆÇೀಶಿಸಿಲ್ಲ. ಪರ ಮತ್ತು ಅಪರಾ ವಿಧ್ಯೆಗಳೆರಡನ್ನೂ ಸಮಾನಾಂತರವಾಗಿ ಕೊಂಡೊಯ್ದ ನಾವಿಂದು ಪರವನ್ನು ಮರೆಯುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಮಕ್ಕಳಿಗೆ ಪರ ಮತ್ತು ಅಪರ ಎರಡರಲ್ಲೂ  ನುಭವಗಳನ್ನು ದಾಟಿಸಬೇಕು ಎಂದವರು ಸೂಚಿಸಿದರು. ಭಾರತೀಯ ಕುಟುಂಬ ವ್ಯವಸ್ಥೆ ಅತ್ಯಪೂರ್ವ ವಿಶೇಷತೆಯಿಂದ ಕೂಡಿದ್ದಾಗಿದ್ದು, ಅದರೊಳಗಿನ ಸಂಬಂಧಗಳು ಆಧುನಿಕತೆಯ ಬರದಲ್ಲಿ ಹಳಸದಿರಲಿ. ಕುಟುಂಬ ನಶಿಸಿದರೆ ಭಾರತೀಯತೆ ಪೂರ್ಣ ಪ್ರಮಾಣದಲ್ಲಿ ಇನ್ನಿಲ್ಲವಾಗುತ್ತದೆ.   ಉದಾತ್ತ ಚಿಂತನೆಗಳನ್ನು ನಾಶಪಡಿಸುವ ದುಶ್ಯಾಸನ ಪರಂಪರೆಗಳನ್ನು ಕಾಲಾಕಾಲಕ್ಕೆ ತೊಡೆದು ಧರ್ಮರಾಯನ ಸುಭಿಕ್ಷ ಸಮಾಜ ವ್ಯವಸ್ಥೆ ನಮ್ಮದೆಂದು ಅವರು ನೆನಪಿಸಿದರು. ಆಚಾರ ವಿಚಾರಗಳ ಅನುμÁ್ಠನ, ಅದರ ಅನುಭೂತಿ ಹೊಸ ತಲೆಮಾರಿಗೆ ದಾಟಿಸೋಣ. ದಕ್ಷಿಣ-ಉತ್ತರ ಭಾರತ ಬೇರ್ಪಡಿಸುವ ದೇಶ ವಿರೋಧಿ ಮನೋಅಸ್ಥಿತಿಗಳನ್ನು ಮೀರಿ ಅತ್ಯುತ್ತರದ ಶ್ರೀರಾಮ ದಕ್ಷಿಣದ ಧನμÉ್ಕೂೀಟಿಗೆ ಬಂದಂತೆ ಪರಸ್ಪರ ಸಂಬಂಧ, ಸಮಸ್ಕತೆ, ಸನ್ಮನಸ್ಸುಗಳೊಂದಿದೆ ಭವಿಷ್ಯ ರೂಪೀಸುವ ಎಂದವರು ಕರೆನೀಡಿದರು. 

ದಿವ್ಯ ಉಪಸ್ಥಿತರಿದ್ದು ಆಶೀರ್ವಚನ ನೀಡಿದ ಶ್ರೀಕ್ಷೇತ್ರ ಕೇಮಾರಿನ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲ ಸ್ವಾಮೀಜಿ ಅವರು, ದೇವಾಲಯಗಳು ಸಂಸ್ಕಾರ ನೀಡುವ ತಾಣಗಳಾಗಬೇಕು. ಅಪಾಯ ಕೋಟಿಗಳಿಗೆ ಉಪಾಯ ಒಂದೇ, ಅದು ಶಿವ ನಾಮ ಸ್ಮರಣೆ. ಈ ಹಿನ್ನೆಲೆಯಲ್ಲಿ ಭಗವದನುಗ್ರಹಕ್ಕೆ ದ್ವೇಶ ರಹಿತ, ಪ್ರೀತಿ-ಪ್ರೇಮ ಸಹಿತವಾದ ಆಂತರ್ಯ ದೃಷ್ಟಿ ನಮ್ಮಲ್ಲಿರಲಿ. ಯಾವ ವೈಭವ ಸಂಪತ್ತುಗಳಿದ್ದರೂ ಭಗವಂತನ ಸಾಯುಜ್ಯವೊಂದೇ ಅಂತಿಮ ಲಕ್ಷ್ಯ ಎಂದವರು ತಿಳಿಸಿದರು.


ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಬಿ.ಕೆ.ಮಧೂರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಉದ್ಯಮಿ ಗೋವಿಂದ ಬಾಬು ಪೂಜಾರಿ, ಡಾ.ಮಂಜುನಾಥ ಶೆಟ್ಟಿ, ಸಂಜೀವ ಶೆಟ್ಟಿ ಮೊಟ್ಟಕುಂಜ, ಡಾ.ರವೀಶ ಪರವ ಪಡುಮಲೆ, ವಸಂತ ಅಜಕ್ಕೋಡು,ನಿವೃತ್ತ ಡಿವೈ.ಎಸ್.ಪಿ. ಹರಿಶ್ಚಂದ್ರ ನಾಯ್ಕ್, ಕಾಸರಗೋಡು ಕೂರುಂಭಾ ಭಗವತಿ ಕ್ಷೇತ್ರದ ಐವರು ಅಚ್ಚಮ್ಮಾರರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ವಕೀಲ.ಕೆ.ಶ್ರೀಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಎನ್.ಚಂದ್ರಗೋಪಾಲ ಮಧೂರು ವಂದಿಸಿದರು. ಪತ್ರಕರ್ತ ವೇಣುಗೋಪಾಲ ಶೇಣಿ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries