HEALTH TIPS

ಹಣದ ಹಿಂದೆ ಬೀಳದೆ ಗುಣದ ಜೊತೆ ಬದುಕೋಣ-ಡಾ.ಕಲ್ಲಡ್ಕ

ಮಧೂರು:   ನಮ್ಮ ದೇಶ ವೈಶಿಷ್ಟ್ಯ ಪೂರ್ಣ ದೇಶ. ಭಾರತಕ್ಕೆ ಧರ್ಮವೇ ಆರಾಧನೆ. ಸಾವಿರ ವರ್ಷಗಳ ನಿರಂತರ ಆಕ್ರಮಣ ನಂತರವೂ ಭಾರತ ಭಾರತವಾಗಿರಲು ಕಾರಣ ಇಲ್ಲಿಯ ಧರ್ಮ. ಇಲ್ಲಿ ಧರ್ಮ ಮತ್ತು ರಾಷಟಾರ ಒಂದೇ ಆಗಿರುವುದೇ ಇದಕ್ಕೆ ಕಾರಣ. ಸ್ವಾತಂತ್ರ್ಯದ ಬಳಕಿಕದ ಸೆಕ್ಯುಲರಿಸಂ ಹೆಸರಿನ ಆಕ್ರಮಣದ ನಂತರವೂ ಉಳಿಯಲು ಕಾರಣ ತಾಯಂದಿರಿಂದ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಭಿಪ್ರಾಯಪಟ್ಟರು.

ಮಧೂರು ಶ್ರೀಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಷ್ಟಬಂಧ ಬ್ರಹ್ಮಕಲಶೋತ್ಸವ-ಮೂಡಪ್ಪ ಸೇವೆಯ ಅಂಗವಾಗಿ ಬುಧವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಪ್ರಧಾನ ಉಪನ್ಯಾಸಗೈದು ಅವರು ಮಾತನಾಡಿದರು.


ಸಕಲ ಚರಾಚರ ವಸ್ತುಗಳಲ್ಲೂ ದೇವರನ್ನು ಕಾಣುವ ಸಂಸ್ಕøತಿ ನಮ್ಮದು. ಇಲ್ಲಿಯ ಕಲ್ಲು ಹೊಡೆಯಲಲ್ಲ, ಅದು ಪೂಜಿಸಲು ಎಂಬ ವಿಶಾಲತೆ ಭಾರತದ್ದು. ಇಲ್ಲಿಯ, ಜಲ,ನೆಲ, ಬೆಟ್ಟಗಳೆಲ್ಲವೂ ನಮ್ಮ ಜೀವನದೊಂದಿಗೆ ಅವಿನಾಭವ ಸಂಬಂಧ ಹೊಂದಿದೆ. ಧರ್ಮ ಎಂದರೆ ರಿಲೀಜನ್ ಅಲ್ಲ. ಇಲ್ಲಿ ಪ್ರವಾದಿಯಾಗಲಿ, ಒಂದು ಗ್ರಂಥವಾಗಲಿ ಇಲ್ಲ. ಜೀವನ ಎಂದರೆ ಏನೆಂಬುದನ್ನು ತಿಳಿಸಿಕೊಟ್ಟವರೇ ಭಾರತೀಯರು. ಎಲ್ಲರಿಗೂ ಸರ್ವ ಸ್ವಾತಂತ್ರ್ಯ ಕೊಟ್ಟ ಧರ್ಮ ನಮ್ಮದು. ಧರ್ಮ್ ಪ್ರತೀಕವಾಗಿ ದೇವಾಲಯ ಬೆಳೆದುಬರಬೇಕು. ದೇವರ ಅಸ್ತಿತ್ವ ನಿರಾಕರಿಸಿ ಬದುಕಲು ಭಾರತದಲ್ಲಿ ಸಾಧ್ಯವೇ ಇಲ್ಲ. ದೇವರು ನಮ್ಮೆಲ್ಲರ ಜೀವನದಲ್ಲಿ ಒಂದಿಲ್ಲೊಂದು ಗಳಿಗೆಯಲ್ಲಿ ನಮ್ಮೊಳಗೆ ಕಾಡುತ್ತಿರುತ್ತಾನೆ ಎಂದವರು ನೆನಪಿಸಿದರು. 

ಅಧಿಕಾರ ಲಾಲಸೆಯಿಂದ 1947ರಲ್ಲಿ ಭಾರತವನ್ನು ಎರಡು ಹೋಳಾಗಿಸಿದ್ದು ದೊಡ್ಡ ದುರಂತ. ಧರ್ಮ ಪ್ರಜಾಭಿವೃದ್ದಿತ್ರಂ ಎಂಬ ಪರಿಕಲ್ಪನೆಯ ನಮ್ಮ ವಿವಾಹಗಳು ಇಂದು ತಲೆಕೆಳಗಾಗುತ್ತಿರುವುದು ದೌರ್ಭಾಗ್ಯಕರ. ಹಿಂದೂ ಸಮಾಜ ಉಳಿಯಲು, ದೇವಾಲಯಗಳ ಉಳಿವಿಗೆ ಪೀಳಿಗೆಯನ್ನು ಬೆಳೆಸಿ ತಯಾರುಗೊಳಿಸಬೇಕಿದೆ. ಚರಿತ್ರೆ ಅರ್ಥ ಮಾಡದವ ಚರಿತ್ರೆ ನಿರ್ಮಿಸಲಾರ. ಹಿಂದೂಗಳು ಪರಸ್ಪರ ಯಾವುದೇ ವಾದ-ವಿವಾದಗಳು ಮಾಡದೆ ಒಗ್ಗಟ್ಟಾಗಿರಬೇಕಾದ ಅನಿವಾರ್ಯತೆ ಭವಿಷ್ಯದಲ್ಲಿ ಹೆಚ್ಚಿದೆ ಎಂದರು.

ದೇವರಿಗಿಂತ ದೊಡ್ಡ ಪ್ರತಿμÉ್ಠ ಈ ಕ್ಷೇತ್ರದಲ್ಲಿ ಬೇರೊಂದಿಲ್ಲ. ಅದರ ಹೊರತು ಸ್ವಪ್ರತಿμÉ್ಠ ಸ್ವೀಕಾರಾರ್ಹವಲ್ಲ. ಹಣದ ಹಿಂದೆ ಬೀಳದೆ ಗುಣದ ಜೊತೆ ಬದುಕೋಣ ಎಂದವರು ತಿಳಿಸಿದರು.  

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ, ಉಡುಪಿಯ ಪ್ರಮೋದ್ ಮದ್ವರಾಜ್ ಉಪಸ್ಥಿತರಿದ್ದರು.

ದಿವ್ಯ ಉಪಸ್ಥಿತರಿದ್ದ , ಶ್ರೀಕ್ಷೇತ್ರದ ತಂತ್ರಿವರ್ಯ  ಬ್ರಹ್ಮಶ್ರೀ ಡಾ.ಶಿವಪ್ರಸಾದ್ ತಂತ್ರಿ ದೇರೇಬೈಲು ಅವರು ಮಾತನಾಡಿ, ತಂದೆ-ಮಗ ಒಂದೆಡೆ  ಒಟ್ಟುಸೇರಿ ಆರಾಧಿಸಲ್ಪಡುವ ಮಧೂರು ಶ್ರೀಕ್ಷೇತ್ರ ವಿಶಿಷ್ಟ ಕೇಂದ್ರವಾಗಿದೆ. ಭಗವದ್ಬಕ್ತರೆಲ್ಲರ ಸಹಕಾರದೊಂದಿಗೆ ಈ ಕ್ಷೇತ್ರ ಜೀರ್ಣೋದ್ದಾರಗೊಂಡಿದೆ. ಎಲ್ಲಾ ಶಕ್ತಿಗಳೂ ಇದೀಗ ಮತ್ತೆ ಸಶಕ್ತಗೊಂಡು ಭಜಕರ ಆಶೋತ್ತರ ಪೂರೈಸಲು ಬ್ರಹ್ಮಕಲಶೋತ್ಸವದ ಮೂಲಕ ಸನ್ನದ್ಧಗೊಂಡಿದೆ. ಇಲ್ಲಿ ನಡೆಸಿದ ವಿಧಿವಿಧಾನಗಳಿಂದ ಜೀವಕಳೆ ಮತ್ತೆ ಜ್ವಾಜ್ವಲ್ಯಮಾನವಾಗಿದೆ. ಪುನರ್ ನಿರ್ಮಾಣದ ಸಂಕೇತವಾಗಿ ಸಾವಿರ ಕಲಶಗಳೊಂದಿಗೆ ಅಷ್ಟಬಂಧ ಸಹಿತ ಬ್ರಹ್ಮಕಲಶ, ಶಿಖರ ಪ್ರತಿμÉ್ಠಯೊಂದಿಗೆ ಸಂಪೂರ್ಣವಾಗಿ ಭಕ್ತರಿಂದ ಸಮರ್ಪಣೆಯಾಗಿದೆ ಎಂದರು.  ಶ್ರದ್ಧಾ ಭಕ್ತಿಯ ಸಂಕೇಥವಾಗಿ ಸಹಸ್ರ ಸಹಸ್ರ ಸಂಖ್ಯೆಯ ಭಜಕರು ಆಗಮಿಸಿದ್ದು ವಿಶೇಷವಾದ್ದು ಎಂದರು. ನಮ್ಮ ಧರ್ಮದಲ್ಲಿ ಮಾಡಿದ ತಪ್ಪುಗಳ ಪರಿಮಾರ್ಜನೆಗೆ ಭಗವಂತನ ದರ್ಶನ, ಆರಾಧನೆ ಮಾತ್ರ ಸಾಕಾಗುತ್ತದೆ ಎಂದರು.  

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ವಿಹಿಂಪ ಕೇರಳ ರಾಜ್ಯ ಕಾರ್ಯದರ್ಶಿ ವಿ.ಆರ್.ರಾಜಶೇಖರನ್ ಮಾತನಾಡಿ, ಭಾರತದ ಉದ್ದಗಲವೂ ಆಧ್ಯಾತ್ಮಿಕ ಶಕ್ತಿಯ ಬೆಂಬಲ ಎಂದಿಗೂ ಕೇಳಿಬರಬೇಕು. ಭೇದಭಾವಗಳಿಲ್ಲದೆ ಸಮಾಜ ಮುನ್ನಡೆಯಬೇಕು. ಆಧ್ಯಾತ್ಮಕತೆಯಿಂದ ನವಕೇರಳ ಸೃಷ್ಟಿ ಇಲ್ಲಿಂದ ಆರಂಭಗೊಳ್ಳಬೇಕು. ನಮ್ಮ ಮಣ್ಣಿನ ಸನ್ಯಾಸಿ ಪರಂಪರೆಯ ನಿರಂತರ ಪ್ರಯತ್ನಗಳಿಂದ ಧರ್ಮಾಚರಣೆ, ಗ್ರಂಥಗಳು ಉಳಿದುಬಂದಿದ್ದು ಅದನ್ನು ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ. ಕುಟುಂಬ ವೈವಸ್ಥೆಯನ್ನು ಬಲಪಡಿಸಬೇಕು ಎಂದವರು ತಿಳಿಸಿದರು.   

 ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಆರ್.ಕೆ.ನಾಯರ್ ಗುಜರಾತ್,   ಅತಿಥಿಗಳಾಗಿ ಉಪಸ್ಥಿತರಿದ್ದರು. ಮಧೂರು ಗ್ರಾ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಮುಂಬಯಿ ರಿಲಯನ್ಸ್ ಇಂಡಿಯಾದ ದಯಾಸಾಗರ ಚೌಟ, ವೈಷ್ಣವಿ ಶಿವಪ್ರಸಾದ ತಂತ್ರಿ ದೇರೇಬೈಲು,   ಇಚ್ಲಂಪಾಡಿ ಲಕ್ಷ್ಮಣ ಪೆರಿಯಡ್ಕ, ಸಮಾಜ ಸೇವಕ ಜಯಕುಮಾರ್ , ಆಟ್ ಲಿವಿಂಗ್ ನ  ಐ.ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಉಪಸ್ಥಿತರಿದ್ದರು. 

ವೈದಿಕ ಸಮಿತಿ ಅಧ್ಯಕ್ಷ ಕೆ.ವಿಷ್ಣು ಭಟ್ ಕಕ್ಕೆಪ್ಪಾಡಿ ಸ್ವಾಗತಿಸಿ, ಉಪೇಂದ್ರ ಕೋಟೆಕಣಿ ವಂದಿಸಿದರು.  ಸಂದೇಶ್ ನಾಯ್ಕ್ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries