ಏಕೆಂದರೆ ಚಪಾತಿ ಹಿಟ್ಟು ಹದ ಮಾಡುವಾಗ ಎಚ್ಚರಿಕೆ ವಹಿಸಿದರೆ ಚಪಾತಿ ಮೃದುವಾಗಿ ಬರುತ್ತೆ. ಹಾಗೆ ಎಲ್ಲರು ಚಪಾತಿ ಸವಿಯಲು ಇಷ್ಟಪಡುತ್ತಾರೆ. ಹಾಗೆ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಚಪಾತಿ ಸವಿಯಬೇಕಾದರೆ ಅದು ಮೃದುವಾಗಿರಬೇಕು. ಆದ್ರೆ ಚಪಾತಿ ಬಿಸಿ ಬಿಸಿ ಇರುವಾಗಲೇ ಸವಿಯುವುದು ರುಚಿ ಹೆಚ್ಚಾಗುವಂತೆ ಮಾಡುತ್ತೆ.
ಆದ್ರೆ ನೀವು ಒಮ್ಮೆ ಮಾಡಿದ ಚಪಾತಿ ಮತ್ತೊಂದು ಹೊತ್ತಿಗೆ ಸವಿಯಲು ಮುಂದಾದಾದ ಅದು ಗಟ್ಟಿಯಾಗಿರುತ್ತೆ. ಹಾಗೆ ಕೆಲವರು ಒಂದು ದಿನ ಬಹಳಷ್ಟು ಚಪಾತಿಯನ್ನು ಮಾಡಿ ಒಂದಿಷ್ಟು ದಿನಗಳ ಕಾಲ ಇಟ್ಟು ಸವಿಯಲು ಮುಂದಾಗುವುದು ನೋಡಬಹುದು. ಏಕೆಂದರೆ ನಿತ್ಯ ಚಪಾತಿ ಮಾಡುವ ಸಮಯದಲ್ಲಿ ಬೇರೆ ಕೆಲಸಗಳ ಮಾಡಲು ಅವರು ಮುಂದಾಗುತ್ತಾರೆ.
ಆದರೆ ಬಹುಬೇಗ ಚಪಾತಿ ಗಟ್ಟಿಯಾಗುವುದನ್ನು ತಡೆಯುವುದು ಹೇಗೆ ಅನ್ನೋದನ್ನೋ ನೋಡೋಣ. ನೀವು ಬಿಸಿ ಬಿಸಿಯಾಗಿರುವ ಚಪಾತಿಯನ್ನು ಹಾಟ್ ಬಾಕ್ಸ್‌ನಲ್ಲಿ ಹಾಕಿ ಇಡುವು ಬಹಳ ಸಮಯ ಮೃದುವಾಗಿರಲು ಸಹಾಯ ಮಾಡಲಿದೆ. ಹಾಗಾದ್ರೆ ನಾವಿಂದು ಚಪಾತಿಯನ್ನು ಹಲವು ದಿನಗಳ ಕಾಲ ಪಚಾತಿ ಗಟ್ಟಿಯಾಗದಂತೆ ಇಡುವುದು ಹೇಗೆ ಅನ್ನೋದನ್ನು ನಾವು ತಿಳಿದುಕೊಳ್ಳೋಣ.

ಗಾಳಿ ಆಡದ ಬಾಕ್ಸ್‌ಗೆ ಹಾಕಿಡಿ:
ಚಪಾತಿ ಮಾಡಿದ ಬಳಿಕ ಬಿಸಿ ಇರುವಾಗಲೇ ಗಾಳಿ ಆಡದೆ ಇರುವ ಬಾಕ್ಸ್‌ಗೆ ಹಾಕಿ ಇಡಬೇಕು. ಇದರಿಂದ ಚಪಾತಿಯು ಮೃದುವಾಗಿರಲಿದೆ. ಹಾಗೆ ಎಷ್ಟು ಸಮಯ ಬೇಕಾದರೂ ಇಡಬಹುದು. ನಿಮಗೆ ಬೇಕಾದಾಗ ಚಪಾತಿಯನ್ನು ತೆಗೆದು ಮತ್ತೆ ಉಳಿದ ಚಪಾತಿಯನ್ನು ಹಾಗೆಯೇ ಇಡಬಹುದು. ಬಾಕ್ಸ್‌ನಿಂದ ತೆಗೆದ ಚಪಾತಿಯನ್ನು ಮತ್ತೆ ಬಿಸಿ ಮಾಡಿ ಸವಿಯಲು ನೀಡಿದರೆ ಮೃದುವಾಗಿರುತ್ತೆ. ಕಾಯಿಸುವಾಗ ಮತ್ತೆ ಸ್ವಲ್ಪವೇ ಎಣ್ಣೆ ಹಚ್ಚಿಕೊಳ್ಳುವುದು ಉತ್ತಮ.
ಪೇಪರ್‌ನಲ್ಲಿ ಸುತ್ತಿ ಇಡುವುದು: ಬಿಸಿ ಬಿಸಿ ಚಪಾತಿಯನ್ನು ಒಂದು ಪೇಪರ್‌ನಲ್ಲಿ ಸುತ್ತಿ ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಇಟ್ಟರೆ ಬಹಳ ಸಮಯ ಮೃದುವಾಗಿ ಇರಲಿದೆ. ಗಾಳಿ ಚಪಾತಿಯನ್ನು ತಲುಪದೇ ಇದ್ದರೆ ಅದು ಗಟ್ಟಿಯಾಗುವುದಿಲ್ಲ.
ಪೇಪರ್‌ನಲ್ಲಿ ಸುತ್ತಿ ಇಡುವುದು: ಬಿಸಿ ಬಿಸಿ ಚಪಾತಿಯನ್ನು ಒಂದು ಪೇಪರ್‌ನಲ್ಲಿ ಸುತ್ತಿ ಅದನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಇಟ್ಟರೆ ಬಹಳ ಸಮಯ ಮೃದುವಾಗಿ ಇರಲಿದೆ. ಗಾಳಿ ಚಪಾತಿಯನ್ನು ತಲುಪದೇ ಇದ್ದರೆ ಅದು ಗಟ್ಟಿಯಾಗುವುದಿಲ್ಲ.
ಹಬೆಯ ಪಾತ್ರೆಯಲ್ಲಿ ಇಡುವುದು: ಮನೆಯಲ್ಲಿ ದೊಡ್ಡ ಕುಕ್ಕರ್ ಇದ್ದರೆ ಅದರಲ್ಲಿ ನೀರು ಬಿಸಿ ಮಾಡಬೇಕು, ನೀರು ಕುದಿ ಬರುವಾಗ ಒಲೆ ಆಫ್ ಮಾಡಿ. ಹಾಗೆ ಚಪಾತಿಯನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಆ ಬಾಕ್ಸ್ ಅನ್ನು ಈ ಕುಕ್ಕರ್ ಒಳಗೆ ಹಾಕಿ ಬಳಿಕ ಮುಚ್ಚಳ ಮುಚ್ಚಿ ಇಡಿ. ಹೀಗೆ ಮಾಡುವುದರಿಂದ ಬಹಳ ಸಮಯ ಚಪಾತಿಯು ಮೃದುವಾಗಿರಲಿದೆ. ನೀವು ಯಾವಾಗ ಬೇಕಾದರು ಈ ಚಪಾತಿಯನ್ನು ಸವಿಯಬಹುದು.
ಇನ್ನು ಚಪಾತಿಗೆ ಹಿಟ್ಟು ಮಾಡಿಕೊಳ್ಳುವಾಗಲೇ ನೀರು ಹಾಗೂ ಎಣ್ಣೆಯನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ ಚೆನ್ನಾಗಿ ಹದ ಮಾಡಿಕೊಳ್ಳಬೇಕು. ಹಾಗೆ ಬಿರುಕು ಇಲ್ಲದಂತೆ ಹಿಟ್ಟನ್ನು ಹದ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮೇಲೆ ಎಣ್ಣೆ ಹಚ್ಚಿ ಮುಚ್ಚಳ ಮುಚ್ಚಿ ಇಡಿ. ಸುಮಾರು 1 ಗಂಟೆಯಾದರು ಹಿಟ್ಟನ್ನು ಬಿಟ್ಟು ನಂತರ ಮತ್ತೆ ಹದ ಮಾಡಿಕೊಂಡು ಚಪಾತಿ ಮಾಡಲು ಆರಂಭಿಸಿ. ಈ ರೀತಿ ಮಾಡುವುದರಿಂದಲೂ ಚಪಾತಿ ಮೃದುವಾಗಿ ಬರಲಿದೆ. ನೀವು ಕೂಡ ಈ ಟ್ರಿಕ್ಸ್‌ಗಳ ಫಾಲೋ ಮಾಡಿ ಚಪಾತಿ ಮೃದುವಾಗಿರುವಂತೆ ನೋಡಿಕೊಳ್ಳಿ.