ಪೆರ್ಲ: ವಿದ್ಯಾ ಭಾರತಿ ಉಚ್ಚ ಶಿಕ್ಷಾ ಸನ್ಮಾನ್, ನಾಲಂದ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ನಾಲಂದ ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ಭಾರತ್ ಬೋಧ್ ಮಾಲಾ ಎಂಬ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ನಾಲಂದ ಮಹಾವಿದ್ಯಾಲಯದಲ್ಲಿ 'ವ್ಯಾಸರಾಯ ಬಲ್ಲಾಳ ಮತ್ತು ಟಿ. ಪದ್ಮನಾಭನ್ ಅವರ ಕಥೆಗಳಲ್ಲಿ ಪರಕೀಯ ಪ್ರಜ್ಞೆ - ಒಂದು ತೌಲಾನಿಕ ನೋಟ' ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು. ಡಾ. ಸುಭಾಷ್ ಪಟ್ಟಾಜೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಶಂಕರ ಖಂಡಿಗೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎನ್ ಎಸ್ ಎಸ್ ಯೋಜನಾಧಿಕಾರಿ ವರ್ಷಿತ್. ಕೆ ಸ್ವಾಗತಿಸಿ, ವಿದ್ಯಾರ್ಥಿನಿ ಶ್ರೀಲಕ್ಷ್ಮಿ ವಂದಿಸಿದರು. ಪ್ರಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು. ವಿಧ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.