ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದಲ್ಲಿ ವಾರ್ಷಿಕ ರಥೋತ್ಸವ ಅಂಗವಾಗಿ ಶ್ರೀ ದೇವರ ಅಯ್ಯಂಗಾಯಿ ದರ್ಶನ ಬಲಿ ಶನಿವಾರ ಜರುಗಿತು. ಬ್ರಹ್ಮಶ್ರೀ ದೇಲಂಪಾಡಿ ಅನಿರುದ್ಧ ತಂತ್ರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಶ್ರೀದೇವರ ಕಟ್ಟೆಪೂಜೆ, ರಥೋತ್ಸವ, ಬೆಡಿ, ದರ್ಶನ, ಶಯನ ನಡೆಯಿತು. ಏ. 13ರಂದು ಬೆಳಗ್ಗೆ ಕವಾಟೋದ್ಘಾಟನೆ, ಜಲದ್ರೋಣಿ ಪೂಜೆ, ಅಭಿಷೇಕ, ಹಣ್ಣುಕಾಯಿ ಸಮರ್ಪಣೆ, ಯಾತ್ರಾಹೋಮ, ಮಧ್ಯಾಹ್ನ 1.30ಕ್ಕೆ ಶ್ರೀದೇವರ ಬಲಿ ಹೊರಡುವುದು, ಕಟ್ಟೆಪೂಜೆ, ಅವಭೃತ ಸ್ನಾನಕ್ಕಾಗಿ ಕಾನ ವನಶಾಸ್ತರ ಸನ್ನಿಧಿಗೆ ಶ್ರೀದೇವರ ನಿರ್ಗಮನ, ನಂತರ ದರ್ಶನ ಬಲಿ, ರಾಜಾಂಗಣ ಪ್ರಸಾದ, ಬಟ್ಟಲು ಕಾಣಿಕೆ, ಧ್ವಜಾವರೋಹಣ, ಮಂತ್ರಾಕ್ಷತೆ, ರಾತ್ರಿ 8ರಿಂದ ಶ್ರೀಪಿಲಿಭೂತ ನೇಮ ನಡೆಯಿತು.
ಬಜಕೂಡ್ಲು ಶ್ರೀ ಮಹಾಲಿಂಗೆಶ್ವರ ದೇವಸ್ಥಾನದಲ್ಲಿ ಶ್ರೀ ದೇವರ ಅಯ್ಯಂಗಾಯಿ ದರ್ಶನ ಬಲಿ ನಡೆಯಿತು.