ಬದಿಯಡ್ಕ: ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ನಡೆದು ಬರುತ್ತಿರುವ ವಸಂತ ವೇದ ಪಾಠ ಶಿಬಿರವನ್ನು ಹಿರಿಯರಾದ ಶಂಕರ ಭಟ್ ಕಾವೇರಿಕಾನ ಮಂಗಳವಾರ ದೀಪಬೆಳಗಿಸಿ ಉದ್ಘಾಟಿಸಿದರು.
ಏಪ್ರಿಲ್, ಮೇ ಎರಡು ತಿಂಗಳುಗಳ ಕಾಲ ವೇದಪಾಠ ಶಾಲೆಯು ನಡೆಯುತ್ತಿದೆ. ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ನಾರಾಯಣ ಭಟ್ ಪಂಜಿತ್ತಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಉಪನೀತನಾದ ವಟುವು ಸಂಸ್ಕಾರವಂತನಾಗಿ ಬಾಳಲು ವೇದಾಧ್ಯಯನ ಅತೀ ಅಗತ್ಯ. ಸನಾತನ ಭಾರತೀಯ ಸಂಸ್ಕøತಿಗೆ ಚ್ಯುತಿ ಬಾರದಂತೆ ಮುಂದುವರಿಯಬೇಕಾದರೆ ಎಳವೆಯಲ್ಲಿಯೇ ವಿದ್ಯಾರ್ಥಿಗಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು. ಬ್ರಾಹ್ಮಣರ ಶ್ರೇಷ್ಠವಾದ ಸಂಸ್ಕಾರವನ್ನು ಜಗತ್ತೇ ಕೊಂಡಾಡುತ್ತಿದೆ. ನಮ್ಮತನವನ್ನು ಉಳಿಸಿಕೊಂಡು ಬಾಳಿ ಬದುಕಬೇಕು ಎಂದು ತಿಳಿಸಿದ ಅವರು ವೇದಪಾಠ ಶಾಲೆಯನ್ನು ನಿರಂತರವಾಗಿ ಮುಂದುವರಿಸಲು ಎಲ್ಲರೂ ಸಹಕರಿಸಬೇಕು ಎಂದರು.
ಹಿರಿಯ ವಕೀಲ ಶ್ರೀಕೃಷ್ಣ ಭಟ್ ವಾಶೆಮನೆ, ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ಗೋವಿಂದ ಭಟ್ ಏತಡ್ಕ ಮಾತನಾಡಿದರು. ವೇದಶಿಬಿರದ ಗುರುಗಳಾದ ಮಹಾಗಣಪತಿ ಅಳಕ್ಕೆ, ಮುರಳೀಕೃಷ್ಣ ಅಳಕ್ಕೆ ಉಪಸ್ಥಿತರಿದ್ದರು. ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಸ್ವಾಗತಿಸಿ, ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ವಂದಿಸಿದರು.