ಕುಂಬಳೆ: ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದ್ಯೋಡು ಮುಟ್ಟತ್ ಬಳಿ ಹೆದ್ದಾರಿಯಲ್ಲಿ ಬಸ್ಸಿಳಿದು ರಸ್ತೆ ಅಡ್ಡದಾಟುತ್ತಿದ್ದ ಮುಟ್ಟಂ ಕುನ್ನಿಲ್ ನಿವಾಸಿ ಅಬೂಬಕ್ಕರ್(70)ಕಾರು ಡಿಕ್ಕಿಯಾಘಿ ಮೃತಪಟ್ಟಿದ್ದಾರೆ.
ರಸ್ತೆ ಅಡ್ಡದಾಟುವ ಮಧ್ಯೆ ಆಗಮಿಸಿದ ಕಾರು ಡಿಕ್ಕಿಯಾಗಿದ್ದು, ಗಂಭೀರ ಗಾಐಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಡಿಕ್ಕಿಯಾದ ಕಾರು ನಿಲ್ಲಿಸದೆ ಪರಾರಿಯಾಗಿದೆ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಭಾನುವಾರ ಸಂಜೆ 3 ಗಂಟೆಯ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಆರಿಕ್ಕಾಡಿ ಮಖಾಂ ಉರೂಸ್ ನ ಸಮಾರೋಪ ಸಮಾರಂಭಕ್ಕೆ ತೆರಳಿ ಮರಳುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವೃತೆಗೆ ರಸ್ತೆಗೆಸೆಯಲ್ಪಟ್ಟ ಅಬೂಬಕ್ಕರ್ ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು ನಿಲ್ಲಿಸದೆ ಪರಾರಿಯಾಗಿ ಬಳಿಕ ಹೊಸಂಗಡಿಯಲ್ಲಿ ಹೈವೇ ಪೆಟ್ರೋಲಿಂಗ್ ಪೆÇಲೀಸರು ಕಾರನ್ನು ವಶಕ್ಕೆ ತೆಗೆದಿದ್ದಾರೆ.