ಕಾಸರಗೋಡು : ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪಟ್ಟಿ ಪ್ರಕಟಿಸಲಾಗಿದೆ. ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿರುವ ಎಂ.ಎಲ್. ಅಶ್ವಿನಿ ಅವರು ನೂತನ ಪದಾಧಿಕಾರಿಗಳ ಪಟ್ಟಿ ಘೋಷಿಸಿದ್ದಾರೆ. ಈ ಬಾರಿ ಜಿಲ್ಲಾ ಸಮಿತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ.
ಎಂ.ಜನನಿ, ಎ.ಕೆ.ಕಯ್ಯಾರ್, ಎಂ.ಬಾಲ್ ರಾಜ್, ಮಣಿಕಂಠ ರೈ, ಮುರಳೀಧರ ಯಾದವ್ ನಾಯ್ಕಾಪು , ಎಚ್.ಆರ್.ಸುಕನ್ಯ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡವರು. ಪಿ.ಅರ್.ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್ ಪ್ರಧಾನ ಕಾರ್ಯದರ್ಶಿಗಳು, ಎನ್.ಮಧು, ಸಂಜೀವ ಪುಳ್ಕೂರು, ಮಹೇಶ್ ಗೋಪಾಲ್, ಪ್ರಮೀಳಾ ಮಜಲ್, ಪುಷ್ಪಾ ಗೋಪಾಲನ್, ಅಶ್ವಿನಿ ಕೆ.ಎಂ ಅವರನ್ನು ಕಾರ್ಯದರ್ಶಿಗಳನ್ನಾಗಿ ಘೋಷಿಸಲಾಗಿದೆ. ವೀಣಾ ಅರುಣ್ ಶೆಟ್ಟಿ ಪಕ್ಷದ ಜಿಲ್ಲಾ ಕೋಶಾಧಿಕಾರಿಯಾಗಿ ನೇಮಕಗೊಂಡಿದ್ದರೆ.