ಮಧೂರು:ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವಾ ಉತ್ಸವದ ಅಂಗವಾಗಿ ನೂತನವಾಗಿ ರಚಿಸಿರುವ ʼಮೋದಕ ಪ್ರಿಯನೆʼ ಕನ್ನಡ ಭಕ್ತಿಗೀತೆಯ ವಿಡಿಯೊ ಆಲ್ಬಂನ್ನು ಶನಿವಾರ ಶ್ರೀಕ್ಷೇತ್ರದ ದೇವರ ನಡೆಯ ಮುಂದೆ ಲೋಕಾರ್ಪಣೆಗೊಳಿಸಲಾಯಿತು.
ಶ್ರೀಧರ ಮಾಸ್ತರ್ ಕುಕ್ಕಿಲ ರಚಿಸಿ ನಿರ್ಮಾಣ ಮಾಡಿರುವ ಈ ಆಲ್ಬಂ ಗೆ ಅಮ್ಮು ಮಾಸ್ತರ್ ಅಮ್ಮಂಗೋಡು ಸಂಗೀತ ನಿರ್ದೇಶನ ನೀಡಿದ್ದಾರೆ. ಗಣೇಶ್ ನೀರ್ಚಾಲು ಹಾಗೂ ರಮ್ಯಶ್ರೀ ಕುಮಾರಮಂಗಲ ಧ್ವನಿ ನೀಡಿದ್ದಾರೆ. ಸಹ ಗಾಯನದಲ್ಲಿ ವಿದ್ಯಾಲಕ್ಷ್ಮಿ ಉಡುವ ಸಹಕರಿಸಿದ್ದಾರೆ. ಛಾಯಾಗ್ರಹಣದಲ್ಲಿ ವಿಶೇಷ ಚಾನಲ್ ನ ಜಯ ಮಣಿಯಂಪಾರೆ ತಂಡ ನಿರ್ವಹಿಸಿದ್ದಾರೆ. ಪ್ರೋಗ್ರಾಮಿಂಗ್ ಲ್ಲಿ ವಿನೋದ್ ಸಾರಂಗಂ ಚೆರ್ವತ್ತೂರು ಸಹಕರಿಸಿದ್ದಾರೆ.
ಬಿಡುಗಡೆ ಸಮಾರಂಭದಲ್ಲಿ ಪೆರ್ಲ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ರಾಜೇಂದ್ರ ಬಜಕ್ಕೂಡ್ಲು, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಅರ್ಚಕ ವೃಂದದವರು, ದೇವಳದ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.