ಕಾಸರಗೋಡು: ವಿಶ್ವ ಯಕೃತ್ತಿನ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಉದ್ಘಾಟನೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಕಾಞಂಗಾಡ್ ಜಿಲ್ಲಾ ವೈದ್ಯಕೀಯ ಕಚೇರಿಯ ಆರೋಗ್ಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಉಪ ಜಿಲ್ಲಾ ವೈದ್ಯಾಧಿಕಾರಿ ಡಾ.ಸಂತೋಷ್ ಬಿ. ಉದ್ಘಾಟಿಸಿದರು. ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕಿ ಡಾ. ಜೀಜಾ ಎಂ.ಪಿ. ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿ, ಉಪ ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಹಸೀಬ್ ಪಿ. ಪಿ. ವಂದಿಸಿದರು.
ನಂತರ, ಆರೋಗ್ಯ ಕಾರ್ಯಕರ್ತರಿಗಾಗಿ ಆಯೋಜಿಸಲಾದ ತರಬೇತಿ ಕಾರ್ಯಕ್ರಮದಲ್ಲಿ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ.ರಿಜಿತ್ ಕೃಷ್ಣನ್, ಕಾಂಞಂಗಾಡ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಬಿಪಿನ್. ಕೆ ನಾಯರ್, ವೆಳ್ಳರಿಕುಂಡು ತಾಲೂಕು ಆಸ್ಪತ್ರೆ ಕಲ್ಲಾರ್‍ನ ಡಯಟಿಷಿಯನ್ ಮೃದುಲಾ ಅರವಿಂದ್ ತರಗತಿ ನಡೆಸಿದರು. ಯಕೃತ್ತಿನ ಆರೋಗ್ಯ ಮತ್ತು ಯಕೃತ್ತಿನ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಏಪ್ರಿಲ್ 19 ರಂದು ವಿಶ್ವ ಯಕೃತ್ತಿನ ದಿನವನ್ನು ಆಚರಿಸಲಾಗುತ್ತದೆ. ಹೆಪಟೈಟಿಸ್ ಎ, ಹೆಪಟೈಟಿಸ್ ಬಿ, ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್ ಮತ್ತು ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಲಿವರ್ ದಿನವು ಹೆಚ್ಚು ಪ್ರಸ್ತುತವಾಗಿದೆ. ವಿಶ್ವ ಯಕೃತ್ತಿನ ದಿನವನ್ನು 2010 ರಲ್ಲಿ ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ದಿ ಲಿವರ್ (ಇಎಎಸ್.ಎಲ್.) ಪ್ರಾರಂಭಿಸಿತು. 1966 ರಲ್ಲಿ ಸ್ಥಾಪನೆಯ ಸ್ಮರಣಾರ್ಥ ಈ ದಿನವನ್ನು ಏಪ್ರಿಲ್ 19 ರಂದು ಆರಂಭಿಸಲಾಯಿತು. ಈ ವರ್ಷದ ವಿಶ್ವ ಯಕೃತ್ತಿನ ದಿನದ ಸಂದೇಶ 'ಆಹಾರವೇ ಔಷಧ' ಎಂಬುದಾಗಿದೆ.