ಕುಂಬಳೆ: ಅನೇಕ ವರ್ಷಗಳಿಂದ ವಿವಿಧ ಹೋಟೆಲ್ ಗಳಲ್ಲಿ ಅಡುಗೆ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುತ್ತಿಗೆ ಎಡನಾಡು ಗ್ರಾಮದ ಸಜಂಕಳ ನಿವಾಸಿ ವಿಶ್ವನಾಥ(38)ಇದೀಗ ಕಳೆದ ಕೆಲವು ತಿಂಗಳುಗಳಿಂದ ಕಾಲು ನೋವಿನ ತೀವ್ರತೆಯ ಕಾರಣ ಉದ್ಯೋಗ ನಿರ್ವಹಿಸಲಾರದೆ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ.
ಕಾಸರಗೋಡು, ಮಂಗಳೂರು ಮೊದಲಾದೆಡೆಗಳ ಪರಿಣಿತ ವೈದ್ಯರಿಂದ ಚಿಕಿತ್ಸೆ ಪಡೆಯಲಾಗಿದ್ದರೂ ಕಾಲುನೋವಿಂದ ಮುಕ್ತಿ ಇಲ್ಲದಂತಾಗಿದೆ. ಉನ್ನತ ವೈದ್ಯಕೀಯ ಪರಿಶೀಲನೆಯಲ್ಲಿ ಎಲುಬು ಸವೆತ ಮತ್ತು ನರ ದೌರ್ಬಲ್ಯಗಳು ಕಂಡುಬಂದಿದ್ದು, ತುರ್ತು ಶಸ್ತ್ರಚಿಕಿತ್ಸೆಗೆ 6 ಲಕ್ಷ ರೂ.ಗಳಷ್ಟು ಮೊತ್ತ ನಿರೀಕ್ಷಿಸಲಾಗಿದೆ.
ಕಡು ಬಡತನದ ಕುಟುಂಬವಾದ ವಿಶ್ವನಾಥ ಅವರು ಪತ್ನಿ ಓರ್ವ ಪುತ್ರನೊಂದಿಗೆ ವಾಸಿಸುತ್ತಿದ್ದಾರೆ. ವಿಶ್ವನಾಥ ಅವರ ಅನಾರೋಗ್ಯ ಕಾರಣ ಕುಟುಂಬ ನಿರ್ವಹಣೆಯೂ ಇದೀಗ ಡೋಲಾಯಮಾನವಾಗಿದೆ. ಈ ನಿಟ್ಟಿನಲ್ಲಿ ಸಹೃದಯ ದಾನಿಗಳಿಂದ ನೆರವು ನಿರೀಕ್ಷಿಸಲಾಗಿದೆ. ಹೃದಯವಂತರು ವಿಶ್ವನಾಥ. ಬಾಬು ಮೂಲ್ಯರ ಪುತ್ರ. ಕೇರಳ ಗ್ರಾಮೀಣ ಬ್ಯಾಂಕ್ ಪುತ್ತಿಗೆ.ಶಾಖೆ.ಖಾತೆ ಸಂಖ್ಯೆ 40417101064412. ಐಎಫ್.ಎಸ್.ಸಿ.: ಕೆ.ಎಲ್.ಜಿ.ಬಿ.004041
ಬ್ರಾಂಚ್ ಕೋಡ್-40417 ಎಂಬ ಖಾತೆಗೆ ಕೈಲಾದ ನೆರವು ನೀಡಲು ವಿನಂತಿಸಲಾಗಿದೆ.