ಕಾಸರಗೋಡು: ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿಯಾಗಿ ಬಿ.ವಿ. ವಿಜಯಭಾರತ್ ರೆಡ್ಡಿ ಅವರನ್ನು ನೇಮಕಗೊಳಿಸಲಾಗಿದೆ. 2019ನೇ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಇವರು ತಿರೂವನಂತಪುರಂ ನಗರ ಸಹಾಯಕ ಪೆÇೀಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾಸರಗೋಡು ಜಿಲ್ಲಾ ಪೆÇೀಲೀಸ್ ವರಿಷ್ಠಾಧಿಕಾರಿಯಾಗಿದ್ದ ಶಿಲ್ಪಾ ದೇವಯ್ಯ ಅವರನ್ನು ಬೆಂಗಳೂರಿನ ಸಿ.ಬಿ.ಐ ವಿಭಾಗ ಎಸ್.ಪಿಯಾಗಿ ವರ್ಗಾವಣೆಗೊಳಿಸಿರುವುದರಿಂದ ತೆರವಗಿರುವ ಸ್ಥಾನಕ್ಕೆ ನೂತನ ನೇಮಕಾತಿ ನಡೆದಿದೆ.