ಬ್ರಟಿಸ್ಲಾವಾ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ 'ಏಕ್ ಪೇಡ್ ಮಾ ಕೆ ನಾಮ್' (ಅಮ್ಮನ ಹೆಸರಿನಲ್ಲಿ ಒಂದು ಮರ) ಅಭಿಯಾನಕ್ಕೆ ಸ್ಲೋವಾಕಿಯಾ ಗಣರಾಜ್ಯದ ಅಧ್ಯಕ್ಷ ಪೀಟರ್ ಪೆಲಿಗ್ರಿನ್ ಅವರೂ ಬೆಂಬಲ ಪ್ರಕಟಿಸಿದ್ದಾರೆ.
ಸ್ಲೋವಾಕಿಯಾ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಮೋದಿ ಕರೆ ನೀಡಿರುವ ಅಭಿಯಾನದ ಬಗ್ಗೆ ಗುರುವಾರ ಕಾರ್ಯಕ್ರಮವೊಂದರಲ್ಲಿ ವಿವರಿಸಿದರು.