ಮಧೂರು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ವೇವಸ್ಥಾನ ಅಷ್ಟಬಂಧ ಬ್ರಹ್ಮಕಲಶ-ಮೂಡಪ್ಪ ಸೇವಾ ಕಾರ್ಯಕ್ರಮಗಳಿಗೆ ಶುಕ್ರವಾರ ಸುರಿದ ಮಳೆಯಿಂದ ಅಲ್ಪ ಸಮಸ್ಯೆ ಸೃಷ್ಟಿಯಾಗಿತ್ತು. ಶನಿವಾರ ಬದಿಯಡ್ಕ, ಮವ್ವಾರು, ಪೆರ್ಲ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರೂ, ಮಧೂರಿನಲ್ಲಿ ಹನಿಮಳೆಗೆ ಸೀಮಿತವಾಗುವ ಮೂಲಕ ವರುಣ ಕೃಪೆ ತೋರಿರುವುದು ಭಕ್ತಾದಿಗಳಲ್ಲಿ ಸಮಾಧಾನಕ್ಕೆ ಕಾರಣವಾಗಿತ್ತು.
ಭಾನುವಾರ ಭಾರೀ ಬಿಸಿಲಿಗೆ ಶ್ರೀ ಮಹಾಗಣಪತಿಯ ದಿವ್ಯ ದರ್ಶನ ವೀಕ್ಷಣೆಗೆ ಸರತಿ ಸಾಲಲ್ಲಿ ನಿಂತಿದ್ದ ಭಕ್ತಾದಿಗಳನ್ನು ಬೆವರಿಳಿಸುವಂತೆ ಮಾಡಿತ್ತು. ಸ್ವಯಂಸೇವಕರು ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಮೂಲಕ ಭಕ್ತಾದಿಗಳ ದಾಹ ತಣಿಸಿದರು. ಮಳೆಯಿಂದ ನೀರುತುಂಬಿಕೊಂಡಿದ್ದ ಪಾಕಶಾಲೆಯಲ್ಲಿ ಅತ್ಯಂತ ಶ್ರಮದಯಕವಾಗಿ ಅಡುಗೆ ತಯಾರಿಸಿ ನೀಡಿದ ಪಾಕದಾಳುಗಳು ಹಾಗೂ ಸ್ವಯಂಸೇವಕರ ಕೆಲಸ ಶ್ಲಾಘನೀಯವಾಗಿತ್ತು.
ಫೋಟೋ : ದಿವ್ಯದರ್ಶನದ ನಂತರ ಭಕ್ತಾದಿಗಳಿಗೆ ಅಪ್ಪ ಪ್ರಸಾದದ ವಿತರಣೆ ನಡೆಯಿತು.
: ದೇವಾಲಯದಲ್ಲಿ ಭಾನುವಾರ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನಡೆಯಿತು.
: ಭಾನುವಾರ ಸವಿರಾರು ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು.