ಕಠ್ಮಂಡು, ಮಾರ್ಚ್ 31- ಮೌಂಟ್ ಎವರೆಸ್ಟ್ ಪರ್ವತವನ್ನು 1953ರಲ್ಲಿ ಏರಿದ ಸರ್ ಎಡ್ಮಂಡ್ ಹಿಲರಿ ಅವರ ಪತ್ನಿ ಮತ್ತು ಪುತ್ರಿ ಇಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಐವರೂ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಠ್ಮಂಡು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಏಕ ಎಂಜಿನ್ ವಿಮಾನವು ಪತನಗೊಂಡು ಈ ದುರಂತ ಸಂಭವಿಸಿದೆ.
ಮೌಂಟ್ ಎವರೆಸ್ಟ್ ಪರ್ವತ ಏರುವಾಗ ನೆರವಾದ ಶೆರ್ಪಾ ಮಾರ್ಗದರ್ಶಕರ ಕುಟುಂಬದವರಿಗೆ ಶಾಲೆಗಳು ಮತ್ತು ಆಸ್ಪತ್ರೆಗಳ ನಿರ್ಮಾಣ ಕಾರ್ಯದ ಮೇಲ್ವಿಚಾರಣೆಯನ್ನು ಸರ್ ಎಡ್ಮಂಡ್ ವಹಿಸಿದ್ದಾರೆ.