ಕಾಸರಗೋಡು: ಜಿಲ್ಲಾದ್ಯಂತ ಸಂಭ್ರಮದ ಈದುಲ್ ಫಿತ್ರ್ ಸೋವಾರ ಆಚರಿಸಲಾಯಿತು. ಭಾನುವಾರ ರಾತ್ರಿ ಚಂದ್ರ ದರ್ಶನವಾಗುವುದರೊಂದಿಗೆ ಒಂದು ತಿಂಗಳ ಉಪವಾಸ ವ್ರತಾಚರಣೆ ಪೂರ್ತಿಗೊಳಿಸಿ, ಸೋಮವಾರ ಮುಸ್ಲಿಂ ಬಾಂದವರು ಈದುಲ್ ಫಿತ್ರ್ ಹಬ್ಬವನ್ನು ಭಕ್ತಿ, ಸಂಭ್ರಮದಿಂದ ಆಚರಿಸಿದರು.
ತಳಂಗರೆ ಮಾಲಿಕ್‍ದೀನಾರ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಜುಮಾ ಮಸೀದಿ ಸೇರಿದಂತೆ ಕಾಸರಗೋಡು ನಗರ, ನಾಯಮರ್‍ಮೂಲೆ, ಉದುಮ, ಕಾಞಂಗಾಡಿನ ವಿವಿಧ ಮಸೀದಿಗಳಲ್ಲಿ ಬೆಳಗ್ಗೆ ವಿಶೇಷ ಪ್ರಾರ್ಥನೆ, ಈದುಲ್ ಫಿತ್ರ್ ವಿಶೇಷ ನಮಾಜ್ ನಡೆಯಿತು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಕಾಸರಗೋಡು ಕೆಎನ್‍ಎಂ ಟೌನ್ ವತಿಯಿಂದ ಸಲಫಿ ಜುಮಾ ಮಸೀದಿ ನೇತೃತ್ವದಲ್ಲಿ ಪ್ರೆಸ್ ಕ್ಲಬ್ ಮೈದಾನದಲ್ಲಿ ಈದ್ ಗಾಹ್ ಆಯೋಜಿಸಲಾಗಿತ್ತು. ಖತೀಬ್ ಚುಝಾಲಿ ಅಬ್ದುಲ್ಲಾ ಮೌಲವಿ ಪ್ರಾರ್ಥನೆ ಮತ್ತು ಖುತ್ಬಾಕ್ಕೆ ನೇತೃತ್ವ ನೀಡಿದರು.ಹಾರಿಸ್ ಚೇರೂರು, ಇಬ್ರಾಹಿಂ ಕೆ.ಪಿ, ಹಾಶಿಂ ಕೊಲ್ಲಂಪಾಡಿ, ಅಬ್ದುಲ್ ಜಲೀಲ್ ಎ.ಕೆ ಮತ್ತು ಮುಹಮ್ಮದ್ ಮುಸ್ತಫಾ ಉಪಸ್ಥಿತರಿದ್ದರು.
ಪವಿತ್ರ ಪ್ರವಾದಿಯವರ ಬೋಧನೆಗಳ ಪ್ರಕಾರ, ಶ್ರೀಮಂತರು ಮತ್ತು ಬಡವರು, ಒಂದು ತಿಂಗಳ ಉಪವಾಸದ ಮೂಲಕ ಸಾಧಿಸಿದ ಹೃದಯದ ಶುದ್ಧತೆಯಿಂದ ಈದ್ ಮುಬಾರಕ್ ಆಚರಿಸಲಾಗುತ್ತಿದೆ.
PHOTOS: ಕೆಎನ್‍ಎಂ ಟೌನ್ ವತಿಯಿಂದ ಸಲಫಿ ಜುಮಾ ಮಸೀದಿ ನೇತೃತ್ವದಲ್ಲಿ ಪ್ರೆಸ್ ಕ್ಲಬ್ ಮೈದಾನದಲ್ಲಿ ನಡೆದ ಪ್ರಾರ್ಥನೆಗೆ ಚುಝಾಲಿ ಅಬ್ದುಲ್ಲಾ ಮೌಲವಿ ನೇತೃತ್ವ ನೀಡಿದರು.
: ತಳಂಗರೆ ಮಾಲಿಕ್‍ದೀನಾರ್ ದೊಡ್ಡ ಮಸೀದಿಯಲ್ಲಿ ಈದುಲ್ ಫಿತ್ರ್ ಅಂಗವಾಗಿ ವಿಶೇಷ ಪ್ರಾರ್ಥನೆ ನಂತರ ಹೊರಬರುತ್ತಿರುವ ಮುಸ್ಲಿಮರು.
ತಳಂಗರೆ ಮಾಲಿಕ್‍ದೀನಾರ್ ದೊಡ್ಡ ಮಸೀದಿ ಎದುರು ಪುಟ್ಟ ಬಾಲಕರಿಬ್ಬರು ಈದುಲ್ ಫಿತ್ರ್ ಹಬ್ಬದ ಶುಭಾಶಯ ವಿನಿಮಯಮಾಡಿಕೊಂಡರು.