ಬದಿಯಡ್ಕ: ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಕೇಂದ್ರ ಸಮಿತಿ ಮತ್ತು ಪ್ರದೇಶ ಸಮಿತಿಯು ಕರ್ನಾಟಕ ಸಿಇಟಿ ಪರೀಕ್ಷೆಯ ಸಂದರ್ಭ ಕೆಲವು ಪರೀಕ್ಷಾಕೇಂದ್ರಗಳಲ್ಲಿ ಜನಿವಾರ ಧರಿಸಿದ ಕೆಲ ವಿದ್ಯಾರ್ಥಿಗಳಿಗೆ ಅವಮಾನಕರವಾಗಿ ವರ್ತಿಸಿರುವುದು ಖಂಡನೀಯವೆಂದು ಖಂಡನಾ ಸಭೆಯಲ್ಲಿ ತಿಳಿಸಿದೆ.
ಘಟನೆ ಬ್ರಾಹ್ಮಣರ ಅಸ್ತಿತ್ವವನ್ನು ನಾಶಮಾಡುವ ಪ್ರಯತ್ನವಾಗಿದೆ ಮತ್ತು ನಮ್ಮ ಸಂಸ್ಕøತಿ ಮತ್ತು ನಮ್ಮ ಚಿಹ್ನೆಯನ್ನು ನಾಶಮಾಡುವ ಯಾವುದೇ ದುರುದ್ದೇಶಪೂರಿತ ಉದ್ದೇಶವನ್ನು ನಾವು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ, ಈ ಸಂಘಟನೆಯು ಕರ್ನಾಟಕ ಸರ್ಕಾರದ ವಿರುದ್ಧ ಹೋರಾಡುವ ವಿವಿಧ ಸಂಘಟನೆಗಳೊಂದಿಗೆ ಕೈಜೋಡಿಸುತ್ತಿದೆ ಮತ್ತು ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇಂತಹ ಘಟನೆ ಮರುಕಳಿಸದಂತೆ ಸಾರ್ವಜನಿಕ ಜಾಗೃತಿ ಆಂದೋಲನವನ್ನು ಆಯೋಜಿಸುತ್ತಿದೆ ಎಂದು ಶಿವಳ್ಳಿ ಬ್ರಾಹ್ಮಣ ಸಭಾದ ಅಧ್ಯಕ್ಷರು ಕಾರ್ಯದರ್ಶಿಗಳು ಎಡನೀರು ಮಠದಲ್ಲಿ ಸೇರಿದ ಸಭೆಯಲ್ಲಿ ತಿಳಿಸಿದ್ದಾರೆ.
ಖಂಡನಾ ನಿರ್ಣಯಕ್ಕೆ ಎಡನೀರು ಮಠದಲ್ಲಿ ಸೇರಿದ ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ಇದರ ಸದಸ್ಯರು.