ಕಾಸರಗೋಡು: ರಾಜ್ಯ ಸರ್ಕಾರದ ನಾಲ್ಕನೇ ವರ್ಷಾಚರಣೆ ಅಂಗವಾಗಿ ಸಾರ್ವಜನಿಕರಿಗಾಗಿ ರೀಲ್ಸ್ ಹಾಗೂ ಫೋಟೋಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ. 'ನನ್ನ ಕಾಸರಗೋಡು ಕಳೆದ ಒಂಬತ್ತು ವರ್ಷಗಳು' ಎಂಬ ವಿಷಯದ ಬಗ್ಗೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಡೆದಿರುವ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ಪ್ರಾಯೋಗಿಕ ಪುರಾವೆಗಳನ್ನು ರೀಲ್ಸ್ ಗಳ ಮೂಲಕ ಪ್ರಸ್ತುತಪಡಿಸಬೇಕು.
ಅಲ್ಲದೆ ನನ್ನ ಕೇರಳ ಒಂಬತ್ತು ವರ್ಷಗಳು ಎಂಬ ವಿಷಯ ಕೇಂದ್ರೀಕರಿಸಿ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಗೋಚರಿಸುವ ಅಭಿವೃದ್ಧಿ ಮತ್ತು ಕ್ಷೇಮ ಚಟುವಟಿಕೆಗಳ ಪ್ರಾಯೋಗಿಕ ಪುರಾವೆಗಳನ್ನು ಮೊಬೈಲ್ ಕ್ಲಿಕ್‍ಗಳ ಮೂಲಕ ಫೊಟೋಗ್ರಫಿ ಪ್ರಸ್ತುತಪಡಿಸಬೇಕು.
ಸ್ಪರ್ಧಿಗಳು ತಮ್ಮ ನಮೂದುಗಳನ್ನು ರೀಲ್‍ಗಳು, ಹೆಸರು, ವಿಳಾಸ ಮತ್ತು ಫೆÇೀನ್ ಸಂಖ್ಯೆ ಸಹಿತ prdcontest@gmail.com ಎಂಬ ಇಮೇಲ್ ಐಡಿಗೆ ಮಾ. 8ರೊಳಗೆ ಕಳುಹಿಸಬೇಕು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಈ ಬಗ್ಗೆ ಮಾಹಿತಿಗಾಗಿ (04994 255145, 9496003201ರಿಂದ)ಸಂಖ್ಯೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.