ಮಂಜೇಶ್ವರ: ವರ್ಕಾಡಿ ಯೇಸುಕ್ರಿಸ್ತರ ತಿರು ಹೃದಯದ ದೇವಾಲಯದಲ್ಲಿ 3 ನೇ ತರಗತಿಯಿಂದ 10ನೇ ತರಗತಿವರೆಗಿನ ಸುಮಾರು 150 ಮಕ್ಕಳಿಗೆ 3 ದಿನಗಳ ಕಾಲ ರಜಾ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದ ಉದ್ಘಾಟನೆಯನ್ನು ಧರ್ಮ ಗುರುಗಳಾದ ವಂದನೀಯ ಫಾ ಬೇಸಿಲ್ ವಾಸ್ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಧರ್ಮ ಗುರುಗಳಾದ ಫಾ ಸಂತೋಷ್ ಡಿಸೋಜ, ಸೈಂಟ್ ಜೋಸೆಫ್ ಕಾನ್ವೆಂಟ್ ಸುಪೀರಿಯರ್ ಮೊಂತಿ ಗೊಮ್ಸ್, ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ರಾಜೇಶ್ ಡಿಸೋಜ, ಬ್ರದರ್ ಬ್ಲ್ಯಾನಿ ಮೇಲ್ರಾಯ್, ಜಾನ್ಸ್ಟನ್ ಮತ್ತು ಕ್ರೈಸ್ತ ಶಿಕ್ಷಣ ಸಂಯೋಜಕ ರಾಜೇಶ್ ಡಿಸೋಜ ಉಪಸ್ಥಿತರಿದ್ದರು. ವೈಲೆಟ್ ಡಿಸೋಜಾ ಸ್ವಾಗತಿಸಿ,ನಿರೂಪಿಸಿದರು. ರೀಟಾ ಡಿಸೋಜ ವಂದಿಸಿದರು.