ಕುಂಬಳೆ: ಪುನರ್ ನಿರ್ಮಾಣಗೊಂಡ ಅಡ್ಕ ಶ್ರೀ ಚಕ್ರಪದಿ ಬೀರಮಾರ್ಲರ(ಉಳ್ಳಾಕ್ಲು) ಮಾಡದಲ್ಲಿ ದೈವಗಳ ಹಾಗೂ ನಾಗದೇವರ ಪುನಃಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ-ನೇಮೋತ್ಸವ ಸೋಮವಾರ ಆರಂಭಗೊಂಡಿದ್ದು 23ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಬಡಾಜೆಬೀಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಕಾರ್ಯಕ್ರಮಗಳ ಅಂಗವಾಗಿ ಸೋಮವಾರ ಸಂಜೆ 5.ಕ್ಕೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಪ್ರಾರ್ಥನೆ, ಪುಣ್ಯ ಹವನ, ವಾಸ್ತು ಪ್ರಾಕಾರ ಬಲಿ, ಸ್ಥಳ ಶುದ್ದಿ, ಪ್ರಾಂಗಣ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ ನಡೆಯಿತು.
ಇಂದು(ಮಂಗಳವಾರ) ಬೆಳಿಗ್ಗೆ 8.ಕ್ಕೆ ಶ್ರೀ ಗಣಪತಿ ಹೋಮ, ಶಾಂತಿ ಹೋಮ, ಪ್ರಾಯಶ್ಚಿತ ಹೋಮ, ಸಂಜೆ 5.ಕ್ಕೆ ದೈವಗಳ ಕಿರ್ವಾಳು ಮತ್ತು ಮಂಚ ಅಧಿವಾಸ, ನಾಗಬಿಂಬ ಅಧಿವಾಸ, ಕಲಶ ಅಧಿವಾಸ, ಅಧಿವಾಸ ಹೋಮ
ನಡೆಯಲಿದೆ. ಸಂಜೆ 7.ಕ್ಕೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಬುಧವಾರ ಬೆಳಿಗ್ಗೆ 7.ಕ್ಕೆ ಗಣಪತಿ ಹೋಮ, 7.10 ರ ವೃಷಭ ಲಗ್ನ ಸುಮುಹೂರ್ತದಲ್ಲಿ ಶ್ರೀ ಚಕ್ರಪದಿ ಬೀರಮಾರ್ಲರ (ಉಳ್ಳಾಕ್ಲು) ದೈವಗಳ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, 8.45 ರ ವೃಷಭ ಲಗ್ನದಲ್ಲಿ ನಾಗದೇವರ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಆಶ್ಲೇಷಬಲಿ, ನಾಗತಂಬಿಲ, ಪ್ರಸಾದ ವಿತರಣೆ, 10 ರಿಂದ ಅಣ್ಣದೈವದ ನೇಮೋತ್ಸವ, ಬೆಳಿಗ್ಗೆ 11.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹಾಗೂ ಸಾಧ್ವಿ ಶ್ರೀ ಮಾತಾನಂದಮಯೀ ಆಶೀರ್ವಚನ ನೀಡುವರು. ಪತ್ರಕರ್ತ, ಸಾಹಿತಿ ಮಲಾರ್ ಜಯರಾಮ ರೈ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶ್ರೀ ಸದಾಶಿವ ಕೆ. ಶೆಟ್ಟಿ ಕೂಳೂರು ಕನ್ಯಾನ, ಶಶಿಧರ ಬಿ. ಶೆಟ್ಟಿ, ಕೆ. ಕೆ. ಶೆಟ್ಟಿ, ಸಹಕಾರರತ್ನ ಎ.ಸುರೇಶ್ ರೈ, ನಾರಾಯಣ ಹೆಗ್ಡೆ ಕೋಡಿಬೈಲ್, ಕಿಶೋರ್ ಕುಮಾರ್ ಹೆಗ್ಡೆ, ಡಾ. ಶ್ರೀಧರ ಭಟ್ ಉಪ್ಪಳ, ಪ್ರಶಾಂತ್ ಶಿರಿಯ, ಬಿ. ವಸಂತ ಪೈ ಬದಿಯಡ್ಕ, ರಾಜ ಬೆಳ್ಳಪ್ಪಾಡ ಮಾಡ, ಪ್ರಭಾಕರ ವಿ. ಶೆಟ್ಟಿ ವಾನಂದೆ, ಮಲ್ಲಿಕಾ ಪ್ರಶಾಂತ್ ಪಕ್ಕಳ ಮಲಾರುಬೀಡು, ಕೃಷ್ಣ ಅಡ್ಕ, ಡಾ. ವಿಜಯ ಪಂಡಿತ್ ಉಪಸ್ಥಿತರಿರುವರು. ಮಧ್ಯಾಹ್ನ 1.ಕ್ಕೆ ಮಹಾಸಂತರ್ಪಣೆ, ಮಧ್ಯಾಹ್ನ 3.ಕ್ಕೆ ತಮ್ಮದೈವದ ನೇಮೋತ್ಸವ, ಪ್ರಸಾದ ವಿತರಣೆ, ಸಂಜೆ 7.ಕ್ಕೆ ದತ್ತಾಂಜನೇಯ ಕಲಾಬಳಗ, ರಾಮಾಡಿ, ಕಣ್ವತೀರ್ಥ ಇವರು ಪ್ರಸ್ತುತಪಡಿಸುವ 'ತುಳುನಾಡ ವೈಭವ' ಪ್ರದರ್ಶನಗೊಳ್ಳಲಿದೆ.