ಉಪ್ಪಳ: : ಸಮಗ್ರ ಶಿಕ್ಷಾ ಕೇರಳದ ಮಂಜೇಶ್ವರ ಬಿ.ಆರ್.ಸಿ ಆಯೋಜಿಸಿದ ಮಂಜೇಶ್ವರ ಉಪಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗಿರುವ ಕಾರ್ಯಕ್ರಮ ಜಿ.ಎಲ್.ಪಿ. ಶಾಲೆ ಮುಳಿಂಜ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ಜರಗಿತು.
ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು ವಿದ್ಯಾರ್ಥಿಗಳನ್ನು ಬರಹ ಓದಿನತ್ತ ಪೆÇ್ರೀತ್ಸಾಹಿಸುವ ಬರಹ ಹಾಗೂ ವಾಚನ ಕೂಟವಾಗಿದ್ದು ಸೃಜನ ಶೀಲತೆಗೆ ಬೆಂಬಲ ನೀಡುವ ಕಾರ್ಯಕ್ರಮವಾಗಿದೆ. ಮಂಜೇಶ್ವರ ಉಪಜಿಲ್ಲೆಯ ವಿದ್ಯಾಧಿಕಾರಿ ರಾಜಗೋಪಾಲ್ ಕಾರ್ಯಕ್ರಮ ಉದ್ಘಾಟಿಸಿದರು. ಮಲಯಾಳದ ಕವಿ ಕಲ್ಲರ ವಿಜಯನ್ ಮತ್ತು ಕನ್ನಡದ ಸಾಹಿತಿ,ಯಕ್ಷಗಾನ ನಾಟ್ಯಗುರು, ನಿವೃತ್ತ ಶಿಕ್ಷಕ ಶೇಖರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉಪಸ್ಥಿತರಿದ್ದ ಸಮಾರಂಭದ ಅಧ್ಯಕ್ಷತೆಯನ್ನು ಬಿ.ಆರ್.ಸಿ.ಯ ಬಿ.ಪಿ.ಸಿ ಸುಮಾದೇವಿ ನಿರ್ವಹಿಸಿದರು. ಬಿ.ಆರ್.ಸಿ ತರಬೇತುದಾರ ಸುಮಯ್ಯ ಟೀಚರ್ ಸ್ವಾಗತಿಸಿ, ದಿವ್ಯ ಟೀಚರ್ ವಂದಿಸಿದರು. ಶಿಕ್ಷಕಿ ಶಾರದ ತರಗತಿ ನಡೆಸಿಕೊಟ್ಟರು.