HEALTH TIPS

ದೇಶದ ಆಧ್ಯಾತ್ಮಿಕತೆ ಬಗ್ಗೆ ಅರಿತುಕೊಳ್ಳಲು ವಿಶ್ವ ಕಾತರ-ಮಧೂರು ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆಯಲ್ಲಿ ವತ್ಸನ್ ತಿಲ್ಲಂಗೇರಿ

ಮಧೂರು: ದೇಶದ ಆಧ್ಯಾತ್ಮಿಕತೆಯ ಬಗ್ಗೆ ಅರಿತುಕೊಳ್ಳಲು ವಿಶ್ವ ಇಂದು ಭಾರತದ ಕಡೆ ಕಾತರದಿಂದ ನೋಡುವ ಸನ್ನಿವೇಶ ಸೃಷ್ಟಿಯಾಗಿರುವುದಾಗಿ ವಿಶ್ವ ಹಿಂದೂ ಪರಿಷತ್ ಕೇರಳ ಪ್ರಾಂತ್ಯ ಕಾರ್ಯಾಧ್ಯಕ್ಷ ವತ್ಸನ್ ತಿಲ್ಲಂಗೇರಿ ತಿಳಿಸಿದ್ದಾರೆ.

ಅವರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದ  ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವಾ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಮುಖ್ಯ ಭಾಷಣ ಮಾಡಿದರು. 


ಎಲ್ಲೆಡೆ ಇಂದು ಹಿಂದೂ ಸಮಾಜ ಜಾಗೃತ ಸ್ಥಿತಿಯಲ್ಲಿದೆ. ಜಗತ್ತಿನ ಯಾವ ಮೂಲೆಯಲ್ಲಿಂದು ಯುದ್ಧದ ಕಾರ್ಮೋಡದ ಭೀತಿ ಆವರಿಸಿದ್ದರೂ ನಮ್ಮ ರಾಷ್ಟ್ರ ನೆಮ್ಮದಿಯಿಂದ ಇರಲು ಕಾರಣವಾದ ಶಕ್ತಿಯ ಬಗ್ಗೆ ನಮ್ಮಲ್ಲಿ ಕೃತಾರ್ಥತೆ ಮೂಡಿಬರಬೇಕು. ನಮ್ಮ ಉಪನಿಷತ್ತು, ವೇದ, ಪುರಾಣಗಳು ಜಗತ್ತಿನ ಸರ್ವ ಜೀವಗಳ ಉಳಿತನ್ನμÉ್ಟೀ ಸಾರಿದೆ. ಇಂತಹ ಬೇರೊಂದು ಸಂಸ್ಕøತಿ ಇದ್ದಲ್ಲಿ ಉಲ್ಲೇಖಿಸಬಹುದು. ಕಾಲಾಕಾಲಕ್ಕೆ ಬದಲಾವಣೆಗಳಿಗೆ ಒಗ್ಗಿಕೊಂಡ ನಮ್ಮ ಧರ್ಮ ಹಲವು ಸುಧಾರಣಾ ಪುರುಷರ ಅನುಗ್ರಹದಿಂದ ಶ್ರೀಮಂತಗೊಂಡಿದೆ. ಆಂತರಿಕವಾಗಿ ಏನು ದುಮ್ಮಾನಗಳಿದ್ದರೂ ಅವೆಲ್ಲವನ್ನೂ ಮರೆತು ಸಾಮುದಾಯಿಕವಾಗಿ ನಾವೆಲ್ಲ ಒಂದೇ ಎಂಬ ಭಾವ ನಮ್ಮಲ್ಲಿ ಉದಿಸಿಬರಬೇಕು. ಭಗವಂತನಿಗೆ ಅರ್ಪಿಸುವ ಒಂದೊಂದು ಸೇವೆಯೂ ಪರೋಕ್ಷವಾಗಿ ನಮಗೆ ನಾವೇ ಮಾಡಿಕೊಳ್ಳುವ ಶಕ್ತಿ ಸೀಂಚನವಾಗಿದೆ ಎಂದವರು ತಿಳಿಸಿದರು.   

ಮಹಾಗಣಪತಿ ವಿಶ್ವ ರೂಪಿಯಾಗಿದ್ದು, ಸಂಸ್ಕøತಿ ಮತ್ತು ಪ್ರಕೃತಿಯ ಮೂರ್ತ ರೂಪವಾಗಿದೆ. ನಮ್ಮ ಮುಂದಿನ ಪೀಳಿಗೆಗೆ ಧರ್ಮದ ಬಗ್ಗೆಬೋಧನೆ ನೀಡುವ ಕೆಲಸದ ಜತೆಗೆ ಧರ್ಮರಕ್ಷಣೆಗೆ ಪ್ರತಿಯೊಬ್ಬ ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಹಿರಿಯ ವಕೀಲ ಐ.ವಿ ಭಟ್ ಅಧ್ಯಕ್ಷತೆ ವಹಿಸಿದ್ದರು. 

ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ, ಪ್ರದನ ಕಾರ್ಯದರ್ಶಿ ಜಯದೇವ ಖಂಡಿಗೆ, ವಿಷ್ಣು ಹೆಬ್ಬಾರ್,  ಮಂಗಳೂರು ಶ್ರೀ ಸೋಮನಾಥ ದೇವಸ್ಥಾನದ ಮೊಕ್ತೇಸರ ರವೀಂದ್ರನಾಥ ಆಳ್ವ ಗೌರವ ಉಪಸ್ಥಿತರಿದ್ದರು.

ಉಡುಪಿಯ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಪ್ರಮೋದ್ ಕುಮಾರ್, ಮಂಗಳೂರು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಸಮಿತಿ ಕೋಶಾಧಿಕಾರಿ ಪದ್ಮರಾಜ ರಾಮಯ್ಯ, ಕರ್ನಾಟಕ ಯಕ್ಷಗಾನ ಅಕಾಡಮಿ ಮಾಜಿ ಸದಸ್ಯ ಯೋಗೀಶ ರವ್ ಚಿಗುರುಪಾದೆ, ಉದ್ಯಮಿ, ಕಾಸರಗೋಡು ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನ ಆಡಳಿತ ಮೊಕ್ತೇಸರ ಜಗದೀಶ ಕಾಮತ್ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಜತೆಕಾರ್ಯದರ್ಶಿ ಬಿ. ಸಉರೇಶ್ ನಾಯ್ಕ್ ಸ್ವಾಗತಿಸಿದರು. ಕೃಷ್ಣ ಮೂರ್ತಿ ಎಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಪಾರೆಕಟ್ಟ ವಂದಿಸಿದರು.

--------..................................................................................................................

ಮಧೂರಲ್ಲಿ ನಡೆಯುತ್ತಿರುವುದು ಕುಂಭ ಮೇಳಸಮನ ಕಾರ್ಯಕ್ರಮ-ರಾಘವೇಶ್ವರಶ್ರೀ

ವಿಶ್ವಾವಸು ಸಂವತ್ಸರ ಆರಂಭವಾಗಿದ್ದು, ಸಕಲ ಸಂಪತ್ತುಕೈಗೂಡುವ ಕಾಲ ಇದಾಗಿದೆ. ಯಾವ ದುರಿತಗಳಿದ್ದರೂ ಪರಿಹಾರಗೊಂಡು ಸಮೃದ್ಧಿ ಬಲಗೊಳ್ಳುವ ಸದಾಶಯ ನಮ್ಮಅಂತರಂಗದಲ್ಲಿರಲಿ. ಮಧೂರಲ್ಲಿ ನಡೆಯುತ್ತಿರುವುದು ಕುಂಭಮೇಳ ಸಮಾನ ಭಕ್ತಿಯ ಔನ್ನತ್ಯವಾಗಿದೆ ಎಂದು ಶ್ರೀಸಂಸ್ಥಾನ ಗೋಕರ್ಣ, ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ಬ್ರಹ್ಮಕಲಶೋತ್ಸವ ಸಂಬಂಧ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. 


ಇಲ್ಲಿಯ ವಿಘ್ನವಿನಾಶಕ ಮಹಾಗಣಪತಿಯಿಂದ ವರ್ಷಪೂರ್ತಿ ನೆಮ್ಮದಿ ಮನೆಮಾಡಲಿ. ಇಲ್ಲಿಯ ಸೇವಾ ಮಹತ್ವದ ಅಪ್ಪ ನಿಜವಾಗಿಯೂ ಅನುಗ್ರಹ ಪೂರ್ಣವಾದ ಪ್ರಸಾದವಾಗಿದೆ. ರಾಮ ಕುಳಿತ ಮಾತ್ರಕ್ಕೆ ಅಯೋಧ್ಯೆಯ ಸಿಂಹಾಸನ ಮಹತ್ವಪಡೆದಂತೆ, ಇಲ್ಲಿ ಗೋಡೆಯಲ್ಲಿಮೂಡಿಬಂದ ಅಧಿದೇವತೆಯಾಗಿ ಗಣಪತಿ ವಿರಾಜಮಾನನಾಗಿ ಕಂಗೊಳಿಸುತ್ತಿರುವುದು ಭಕ್ತಾದಿಗಳ ನೆಮ್ಮದಿಗೆ ಕಾರಣವಾಗಿದೆ.  ಶ್ರೀ  ಮದನಂತೇಶ್ವರನ ಭಕ್ತಿಗೊಲಿದ ಮದರುಮಾತೆಯ ಮುಗ್ದ-ಸ್ನಿಗ್ದ ಹಾಗೂ ಮನದುಂಬಿದ ಭಕ್ತಿ ನಮ್ಮಲ್ಲೂ ಮೂಡಿಬರಲಿ. ಕಾರ್ಯಕರ್ತರ ನಿರಂತರ ಶ್ರಮದಿಂದ ಉತ್ಸವ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಅನುಗ್ರಹಿಸಿದರು.  

ಈ ಸಂದರ್ಭ ಬ್ರಹ್ಮಕಲಶ-ಮೂಡಪ್ಪ ಸೇವೆ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬುಟ್ಟಿ ತಯಾರಿಸಿ ನೀಡುವಲ್ಲಿ ನೇತೃತ್ವ ವಹಿಸಿದ್ದ ಕೊರಗ ಸಮುದಾಯದ ಹಿರಿಯರಾದ ಚೋಮು, ಅಂಗಾರೆ ಮೊದಲಾದವರನ್ನು ರಾಘವೇಶ್ವರ ಶ್ರೀಗಳು ಅನುಗ್ರಹ ಮಂತ್ರಾಕ್ಷತೆ,ಸ್ಮರಣಿಕೆ ನೀಡಿ ಹರಸಿದರು.

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಅವರು ದೇವಾಲಯದ ನವೀಕರಣಕಾರ್ಯ-ಬ್ರಹ್ಮಕಲಶೋತ್ಸವ ನಡೆದುಬಂದ ಹಾದಿಯ ಬಗ್ಗೆ ಮಾಹಿತಿ ನೀಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries