ಕಾಸರಗೋಡು: ನಗರದ ಹೊಸಬಸ್‍ನಿಲ್ದಾಣ ವಠಾರದಲ್ಲಿ ಕರಂದಕ್ಕಾಡಿನಿಂದನುಳ್ಳಿಪ್ಪಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಷಟ್ಪಥ ಕಾಮಗಾರಿ ಪೂರ್ತಿಗೊಂಡಿದ್ದು, ಶನಿವಾರದಿಂದ ವಾಹನಗಳ ಸಂಚಾರಕ್ಕೆ ತೆರೆದುಕೊಡಲಾಗಿದೆ.
ಕರಂದಕ್ಕಾಡಿನಿಂದ ನುಳ್ಳಿಪ್ಪಾಡಿ ವರೆಗೆ 5.5ಮೀ. ಎತ್ತರದಲ್ಲಿ 29ಸ್ಪಾನ್‍ಗಳನ್ನು ಬಳಸಿ ಪ್ಲೈಓವರ್ ನಿರ್ಮಿಸಲಾಗಿದೆ. ಕರಂದಕ್ಕಾಡಿನಿಂದ ನುಲ್ಳಿಪ್ಪಡಿ ವರೆಗಿನ 1.12ಕಿ.ಮೀ ಉದ್ದದ ಈ ಮೇಲ್ಸೇತುವೆ ವಾಹನಗಳ ಸಂಚಾರಕ್ಕೆ ತೆರೆದುಕೊಡುವ ಮೂಲಕ ಕಾಸರಗೋಡು ಎಂ.ಜಿ ರಸ್ತೆ ಸೇರಿದಂತೆ ಹಳೇ ಬಸ್ ನಿಲ್ದಾಣ ವಠಾರದಲ್ಲಿ ಪ್ರತಿದಿನ ಕಂಡುಬರುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆಗೆ ಒಂದಷ್ಟು ಪರಿಹಾರ ಲಭಿಸಿದಂತಾಗಿದೆ. ತಲಪ್ಪಾಡಿಯಿಂದ ಚೆಂಗಳ ವರೆಗಿನ ರಾಷ್ಟ್ರೀಯ ಹೆದ್ದಾರಿ ಷಟ್ಪಥ ಕಾಮಗಾರಿ ಒಂದನೇ ರೀಚ್ ಬಹುತೇಕ ಪೂರ್ತಿಗೊಂಡಿದ್ದು, ಸರ್ವೀಸ್ ರಸ್ತೆ ಕಾಮಗರಿಯಷ್ಟೇ ಪೂರ್ತಿಗೊಳ್ಳಬೇಕಾಗಿದೆ. 2025 ಡಿಸೆಂಬರ್ ವೇಳೆಗ ಈ ಎಲ್ಲ ಕಾಂಗಾರಿಪೂರ್ತಿಗೊಂಡು ಷಟ್ಪಥ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಸಂಚಾರಕ್ಕೆ ಲಭ್ಯವಾಗುವ ಸಾಧ್ಯತೆಯಿದೆ. ಉಪ್ಪಳದಲ್ಲೂ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಫ್ಲೈಓವರ್ ಕಾಮಗಾರಿ ಪೂರ್ತಿಗೊಂಡ ನಂತರ ಇದರ ತಳಭಾಗದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಉದ್ಯಾನ, ಮಕ್ಕಳಿಗೆ ಆಟದ ಸ್ಥಳ ನಿರ್ಮಾಣದ ಜತೆಗೆ ಪಿಲ್ಲರ್‍ಗಳಲ್ಲಿ ಕಾಸರಗೋಡಿನ ಸಾಂಸ್ಕøತಿಕ ಇತಿಹಾಸ ನಾಯಕರ ಪೇಂಟಿಂಗ್ ಚಿತ್ರ ರಚನೆ ಯೋಜನೆಯಿರಿಸಿಕೊಳ್ಳಲಾಘಿದೆ. ಮೇಲ್ಸೇತುವೆ ಸಂಚಾರದ ಸಂದರ್ಭ ಸಮುದ್ರದ ವಿಹಂಗಮ ನೋಟವೂ ಕಣ್ಮನಸೆಳೆಯುತ್ತಿದೆ.