ಕುಂಬಳೆ: ಕರ್ನಾಟಕ ಪೆÇಲೀಸ್ ಸೇವೆಯಲ್ಲಿ ಸಾಧನೆಗೈದ ಜಿಲ್ಲೆಯ ಇಬ್ಬರು ಪೆÇಲೀಸ್ ಅಧಿಕಾರಿಗಳು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳ ಪದಕ ಪಡೆದುಕೊಂಡಿದ್ದಾರೆ.
ಕಾಸರಗೋಡು ಅಶೋಕನಗರ ನಿವಾಸಿಯೂ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‍ನ ಎಎಸ್‍ಐ ಕೆ.ವಿ.ಮೋಹನ್ 2023ರ ಸಾಲಿನ ಮುಖ್ಯಮಂತ್ರಿ ಪದಕ ಹಾಗೂ ಕಾಸರಗೋಡು ಜಿಲ್ಲೆಯ ಕುಂಬ್ಡಾಜೆಯ ತೆಕ್ಕೆಮೂಲೆ ನಿವಾಸಿಯೂ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‍ನ ಎಚ್‍ಸಿ ದಾಮೋದರ್ ಕೆ. ಅವರು 2024ನೇ ಸಾಲಿನ ಮುಖ್ಯಮಂತ್ರಿಗಳ ಪದಕವನ್ನು ಬುಧವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡೆದುಕೊಂಡಿದ್ದಾರೆ.
ಕೆ.ವಿ.ಮೋಹನ್ ಅವರು 1993ನೇ ಬ್ಯಾಚ್‍ನ ಪೆÇಲೀಸ್ ಸೇವೆಗೆ ಸೇರ್ಪಡೆಗೊಂಡು ಸುರತ್ಕಲ್, ಬಂದರು, ಪಾಂಡೇಶ್ವರ, ಉಳ್ಳಾಲ, ರೌಡಿನಿಗ್ರಹದಳ ಮುಂತಾದ ಕಡೆ ಕರ್ತವ್ಯ ನಿರ್ವಹಿಸಿ ಹಲವು ಪ್ರಕರಣಗಳನ್ನು ಬೇಽಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಮಂಗಳೂರು ಕ್ರೈಮ್ ಬ್ರಾಂಚ್ ನಲ್ಲಿ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾಪಟು ಆಗಿರುವ ಅವರು ಕಾಸರಗೋಡು ಅಶೋಕನಗರ ಅಶೋಕ್ ಸ್ಪೋಟ್ರ್ಸ್ ಆ್ಯಂಡ್ ಆಟ್ರ್ಸ್ ಕ್ಲಬ್‍ನ ಅಧ್ಯಕ್ಷರೂ ಆಗಿದ್ದಾರೆ.
ದಾಮೋದರ್ ಕೆ. ಅವರು 2000ನೇ ಬ್ಯಾಚ್‍ನಲ್ಲಿ ಪೆÇಲೀಸ್ ಸೇರ್ಪಡೆಗೊಂಡು ಮಂಗಳೂರು ನಗರದ ಬಂದರು, ಪಾಂಡೇಶ್ವರ, ರೌಡಿನಿಗ್ರಹ ದಳ ಸೇರಿದಂತೆ ಹಲವು ಕಡೆ ಕರ್ತವ್ಯ ನಿರ್ವಹಿಸಿದಲ್ಲದೇ ಹಲವು ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪ್ರಸ್ತುತ ಮಂಗಳೂರು ಸಿಟಿ ಕ್ರೈಮ್ ಬ್ರಾಂಚ್‍ನಲ್ಲಿ ಎಚ್‍ಸಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.