ಇಂಫಾಲ್: ಸಂಘರ್ಷ ಪೀಡಿತ ಮಣಿಪುರದಲ್ಲಿ ಶಾಂತಿಯುತ ವಾತಾವರಣ ಪುನರ್‌ಸ್ಥಾಪಿಸಲು ಕೇಂದ್ರ ಗೃಹ ಸಚಿವಾಲಯವು ಏ.5ರಂದು ಕರೆದಿರುವ ಸಂಧಾನ ಸಭೆಗೂ ಮುನ್ನ, ಕುಕಿ ಸಮುದಾಯವು ಮೂರು ಷರತ್ತುಗಳನ್ನು ವಿಧಿಸಿದೆ.
ಕುಕಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಕ್ಕೆ ಮೈತೇಯಿ ಸಮುದಾಯದವರು ಹಾಗೂ ಮೈತೇಯಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶಕ್ಕೆ ಕುಕಿ ಸಮುದಾಯದವರು ಪ್ರವೇಶಿಸುವಂತಿಲ್ಲ.
ಸಂಧಾನ ಮಾತುಕತೆಯು ಯಶಸ್ವಿಯಾಗಬೇಕಿದ್ದಲ್ಲಿ ಕನಿಷ್ಠ ಆರು ತಿಂಗಳು ಸಂಘರ್ಷ ನಡೆಯದಂತೆ ನೋಡಿಕೊಳ್ಳಬೇಕು. ಕದನ ವಿರಾಮದ ಅವಧಿಯಲ್ಲಿ, ಎರಡೂ ಸಮುದಾಯಗಳ ನಡುವೆ ಔಪಚಾರಿಕ ಹಾಗೂ ಅರ್ಥಪೂರ್ಣ ಮಾತುಕತೆಗಳು ನಡೆಯಬೇಕು. ಇವು ಕುಕಿ ಸಮುದಾಯವು ವಿಧಿಸಿರುವ ಮೂರು ಷರತ್ತುಗಳು.
ಕಾಂಗ್‌ಪೋಕ್‌ಪಿ ಜಿಲ್ಲೆಯಲ್ಲಿ ಮಂಗಳವಾರ ನಡೆದ ಕುಕಿ ಸಮುದಾಯದ ಸಮಾಲೋಚನಾ ಸಭೆಯಲ್ಲಿ, ಪೂರ್ವಷರತ್ತು ವಿಧಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಕುಕಿ ಜೋ ಮಂಡಳಿಯ (ಕೆಜಡ್‌ಸಿ) ಅಧ್ಯಕ್ಷ ಹೆನ್ಲಿಯಾಂತಂಗ್ ತಂಗ್ಲೆಟ್ ತಿಳಿಸಿದರು.