ಇಂಫಾಲ್: ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಮಣಿಪುರದ ಬಿಷ್ಣುಪುರ ಮತ್ತು ಕಾಕ್‌ಚಿಂಗ್ ಜಿಲ್ಲೆಗಳಲ್ಲಿ ಬಂಧಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದರು.
ಬಾಲಕ ಹಾಗೂ ಇನ್ನಿಬ್ಬರು ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಪಿಡಬ್ಲುಜಿ) ಸದಸ್ಯರಾಗಿದ್ದು, ಇವರನ್ನು ಶನಿವಾರ ಬಿಷ್ಣುಪುರದಲ್ಲಿ ಬಂಧಿಸಲಾಯಿತು.
ಅಲ್ಲದೆ ಕಾಕ್‌ಚಿಂಗ್‌ನಲ್ಲಿ ನಿಷೇಧಿತ 'ಯುನೈಟೆಡ್ ಪೀಪಲ್ಸ್ ಪಾರ್ಟಿ ಆಫ್ ಕಾಂಗ್ಲೀಪಾಕ್'ನ ಒಬ್ಬ ಸದಸ್ಯನನ್ನು ಬಂಧಿಸಲಾಗಿದೆ.
ಈ ನಡುವೆ ಶೋಧ ಕಾರ್ಯಾಚರಣೆಯ ವೇಳೆ ಜಿರೀಬಾಮ್ ಜಿಲ್ಲೆಯಲ್ಲಿ ಪೊಲೀಸರು ಹಲವಾರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.