ಬ್ಯಾಂಕಾಂಕ್: ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ಅಸುನೀಗಿದವರ ಸಂಖ್ಯೆ 3,500 ದಾಟಿದೆ. ಈ ಮಧ್ಯೆ, ಅವಶೇಷಗಳಡಿ ಸಿಕ್ಕಿದ್ದವರ ರಕ್ಷಣೆಗೆ ಕೈಗೊಂಡಿದ್ದ ಶೋಧ ಕಾರ್ಯವನ್ನು ಅಧಿಕಾರಿಗಳು ಸೋಮವಾರ ಮುಕ್ತಾಯಗೊಳಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಕಟ್ಟಡದಡಿ ಸಿಲುಕಿದ್ದ 10 ಮೃತದೇಹಗಳನ್ನು ಸೋಮವಾರ ಹೊರತೆಗೆದರು.
ಸಿಂಗಪುರ, ಮಲೇಷ್ಯಾ ಮತ್ತು ಭಾರತದಿಂದ ತೆರಳಿದ್ದ ರಕ್ಷಣಾ ತಂಡಗಳು ರಕ್ಷಣಾ ಕಾರ್ಯ ಮುಗಿದ ಹಿನ್ನಲೆಯಲ್ಲಿ ತಮ್ಮ ದೇಶಕ್ಕೆ ಮರಳಿದವು.