ಡಿಜಿಟಲ್ ಪಾವತಿಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿರುವ ಫೋನ್‌ಪೇ, UPI ಸರ್ಕಲ್ ಎಂಬ ವೈಶಿಷ್ಟ್ಯವನ್ನು ಪ್ರಾರಂಭಿಸಿದೆ ಫಿನ್‌ಟೆಕ್ ಕಂಪನಿ ಬುಧವಾರ ತಿಳಿಸಿದೆ. ಇದು ಫೋನ್‌ಪೇ ಬಳಕೆದಾರರಿಗೆ "ಸರ್ಕಲ್ ರಚಿಸಲು" ಮತ್ತು ಅವರ ಕುಟುಂಬ ವರ್ಗವಿರಬಹುದು, ಸ್ನೇಹಿತರು ಅಥವಾ ವಿಶ್ವಾಸಾರ್ಹ ಸಂಪರ್ಕಗಳ ಪರವಾಗಿ ಪಾವತಿಗಳನ್ನು ಮಾಡಲು ಸುಲಭ ಮಾಡಿಕೊಡುತ್ತದೆ.
UPI ಸರ್ಕಲ್ ಒಂದು ವಿಶಿಷ್ಟವಾದ ಸೌಲಭ್ಯವಾಗಿದ್ದು, ಇದರ ಮೂಲಕ ಕುಟುಂಬದ ಅವಲಂಬಿತರು ಬ್ಯಾಂಕ್ ಖಾತೆಯನ್ನು ಹೊಂದಿರದಿದ್ದರೂ ಸಹ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ತಮ್ಮದೇ ಆದ ಪ್ರೊಫೈಲ್ ಅನ್ನು ರಚಿಸಿಕೊಳ್ಳಬಹುದು. ಈ ವ್ಯವಸ್ಥೆಯು ಬ್ಯಾಂಕ್ ಸಂಪರ್ಕವಿಲ್ಲದ ವ್ಯಕ್ತಿಗಳಿಗೆ ಸುರಕ್ಷಿತವಾದ ಹಣಕಾಸು ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಡುತ್ತದೆ ಮತ್ತು ಅವರ ಪರವಾಗಿ ಪಾವತಿಗಳನ್ನು ಅಧಿಕೃತವಾಗಿ ಮಾಡಲು ಅನುಮತಿಸುತ್ತದೆ.
UPI ಸರ್ಕಲ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ?
ಯುಪಿಐ ಸರ್ಕಲ್ ಎಂಬುದು ಎನ್‌ಪಿಸಿಐ ಹೊಸದಾಗಿ ಪರಿಚಯಿಸಿದ ವೈಶಿಷ್ಟ್ಯವಾಗಿದ್ದು, ಇದು ಯುಪಿಐ ವಹಿವಾಟುಗಳಿಗಾಗಿ ಇಬ್ಬರು ಅಥವಾ ಹೆಚ್ಚಿನ ವ್ಯಕ್ತಿಗಳು ಒಂದೇ ಬ್ಯಾಂಕ್ ಖಾತೆಯನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಈ ಹೊಸ ವೈಶಿಷ್ಟ್ಯ ಮೂಲಕ ಹಣ ವರ್ಗಾವಣೆ ಮಾಡಲು ಸ್ವಂತ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡದೆಯೂ ಡಿಜಿಟಲ್ ಪಾವತಿಗಳನ್ನು (ಡಿಜಿಟಲ್ ವಹಿವಾಟು) ಮಾಡಲು ಸಾಧ್ಯವಿದೆ. ಉದಾಹರಣೆಗೆ ಕುಟುಂಬದ ಹಿರಿಯರೊಬ್ಬರಿಗೆ, ಅಥವಾ ಮಕ್ಕಳು ಯುಪಿಐ ವಹಿವಾಟು ಮಾಡಲು ಬಯಸಿದ್ರೆ ಇದಕ್ಕೆ ಬ್ಯಾಂಕ್ ಖಾತೆ ಲಿಂಕ್ ಮಾಡಬೇಕು ಎಂದೇನಿಲ್ಲ. ಅಥವಾ ಅವರು ಮಾಡುವ ಹಣಕಾಸು ವಹಿವಾಟಿನಲ್ಲಿ ಯಾವುದೇ ತಪ್ಪುಗಳು ಆಗದಂತೆ ಎಚ್ಚರ ವಹಿಸಬಹುದಾಗಿದೆ. ಮೊಬೈಲ್ ಹಾಗೂ ಬ್ಯಾಂಕ್ ವಹಿವಾಟು ಚೆನ್ನಾಗಿ ಬಲ್ಲವರು ತಮ್ಮ ಯುಪಿಐ ಸರ್ಕಲ್ ನಲ್ಲಿ ತಮ್ಮ ಸಂಗಾತಿ, ಕುಟುಂಬದ ಸದಸ್ಯರನ್ನು ಅಥವಾ ತಮಗೆ ಬೇಕಾಗಿರುವ ವ್ಯಕ್ತಿಯನ್ನು ಸೇರಿಸಬಹುದಾಗಿದೆ. ಈ ಹೊಸ ಫೀಚರ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸಹಕಾರದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ಅತ್ಯಂತ ಸುರಕ್ಷಿತ ಹಣಕಾಸಿನ ವಹಿವಾಟಿಗೆ ಇದು ಬೆಸ್ಟ್ ಫೀಚರ್ ಆಗಿದೆ.
UPI ಸರ್ಕಲ್ ನಲ್ಲಿ, ಮುಖ್ಯ ಬಳಕೆದಾರರು ತಮ್ಮ UPI ಐಡಿ ಅಥವಾ QR ಕೋಡ್ ಬಳಸಿ ತಮಗೆ ಅಗತ್ಯ ಇರುವವರನ್ನು ಸೇರಿಸಬಹುದು. ಸೇರ್ಪಡೆಯ ಬಳಿಕ ಮುಖ್ಯ ಬಳಕೆದಾರರು ಅವರಿಗಾಗಿ ಪಾವತಿಗಳನ್ನು ಮಾಡಬಹುದು. ಇದರ ಮುಖ್ಯ ವಿಷಯವೆಂದರೆ, ಪಾವತಿಗಳ ಮೇಲೆ ಮುಖ್ಯ ಬಳಕೆದಾರರ ನಿಯಂತ್ರಣವಿರುತ್ತದೆ. ಅಪಾವತಿ ವಿನಂತಿಗಳನ್ನು ಪರಿಶೀಲಿಸಬಹುದು, ಖರ್ಚು- ವೆಚ್ಚಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಪಾವತಿಗಳ ಮಾಹಿತಿಯನ್ನು ಪಡೆಯಬಹುದು. ಬೇಕೆನಿಸಿದರೆ, ಮುಖ್ಯ ಬಳಕೆದಾರರು ದ್ವಿತೀಯ ಬಳಕೆದಾರರಾಗಿ ಸೇರಿಸಿದವರನ್ನು ತೆಗೆದುಹಾಕಬಹುದು. ಪ್ರಾಥಮಿಕ ಬಳಕೆದಾರರು ಮಾಸಿಕ ವಹಿವಾಟಿನ ಮಿತಿಯನ್ನು 15,000 ರೂ.ಗಳವರೆಗೆ ನಿಗದಿಪಡಿಸಬಹುದು, ಪ್ರತಿ ವಹಿವಾಟಿಗೆ ಗರಿಷ್ಠ 5,000 ರೂ.ಗಳವರೆಗೆ ನಿಗದಿಪಡಿಸಬಹುದು.
PhonePe ನಲ್ಲಿ UPI ವೃತ್ತವನ್ನು ಹೇಗೆ ಬಳಸುವುದು:
- ಮೊದಲಿಗೆ, ನಿಮ್ಮ PhonePe ಆಯಪ್ ಅನ್ನು ಓಪನ್ ಮಾಡಿ. ಅಲ್ಲಿ ನಿಮಗೆ UPI ಸರ್ಕಲ್ ಅನ್ನು ಆರಂಭಿಸುವ ಮಾಡುವ ಆಯ್ಕೆ ಕಾಣಿಸುತ್ತದೆ.
- ಇತರರನ್ನು ಸೇರಿಸಲು, 'Invite Secondary Contact' ಎಂಬುದನ್ನು ಒತ್ತಿ. ನಂತರ ಅವರ QR ಕೋಡ್ ಸ್ಕ್ಯಾನ್ ಮಾಡಿ ಅಥವಾ ಅವರ UPI ಐಡಿಯನ್ನು ಟೈಪ್ ಮಾಡಿ.
- ಈ ವೇಳೆ ದ್ವೀತಿಯ ಬಳಕೆದಾರರು ಯಾರಿರುತ್ತಾರೋ ಅವರಿಗೆ ಸರ್ಕಲ್ ಗೆ ಸೇರಲು ಒಂದು ವಿನಂತಿ ಹೋಗುತ್ತದೆ. ಅವರು ಅದನ್ನು ಒಪ್ಪಿಕೊಂಡರೆ, ಅವರು UPI ವೃತ್ತಕ್ಕೆ ಸೇರಿಕೊಳ್ಳುತ್ತಾರೆ.
- ಒಮ್ಮೆ ಸೇರ್ಪಡೆಗೊಂಡ ನಂತರ, ದ್ವಿತೀಯ ಬಳಕೆದಾರರು ಪ್ರಾಥಮಿಕ ಬಳಕೆದಾರರ ಖಾತೆಯನ್ನು ಪಾವತಿ ಆಯ್ಕೆಯಾಗಿ ಅರಿಸಿ ಮತ್ತು ಅವರ ಪರವಾಗಿ ಪಾವತಿಗಳನ್ನು ಮಾಡಲು ಪ್ರಾರಂಭಿಸಬಹುದು.