ನವದೆಹಲಿ: ವಿವಾದಿತ ವಕ್ಫ್ ತಿದ್ದುಪಡಿ ಮಸೂದೆ-2025ಗೆ ಲೋಕಸಭೆ ಗುರುವಾರ ಒಪ್ಪಿಗೆ ನೀಡಿದೆ. ಸತತ 12 ಗಂಟೆಗಳ ಚರ್ಚೆ ಬಳಿಕ ಗುರುವಾರ ನಸುಕಿನ ವೇಳೆಗೆ ಮಸೂದೆಗೆ ಒಪ್ಪಿಗೆ ಲಭಿಸಿತು.
ಎನ್‌ಡಿಎ ಒಕ್ಕೂಟದ ಸದಸ್ಯರು, ಮಸೂದೆ ಅಲ್ಪಸಂಖ್ಯಾತರ ಪರ ಎಂದು ಬಲವಾಗಿ ಸಮರ್ಥಿಸಿಕೊಂಡರೆ, ವಿರೋಧ ಪಕ್ಷಗಳ ಸದಸ್ಯರು 'ಮುಸ್ಲಿಂ ವಿರೋಧಿ' ಎಂದು ಟೀಕಿಸಿದರು.
ಮಸೂದೆಗೆ ವಿರೋಧ ಪಕ್ಷಗಳ ಸದಸ್ಯರು ಸೂಚಿಸಿದ ತಿದ್ದುಪಡಿಯನ್ನು ಧ್ವನಿಮತದ ಮೂಲಕ ತಿರಸ್ಕರಿಸಲಾಯಿತು. ಬಳಿಕ ಮಸೂದೆಯನ್ನು ಸ್ಪೀಕರ್ ಮತಕ್ಕೆ ಹಾಕಿದರು. ಮಸೂದೆಯ ಪರವಾಗಿ 288 ಹಾಗೂ ವಿರುದ್ಧವಾಗಿ 232 ಮತಗಳು ಬಿದ್ದವು.
ಗೃಹ ಸಚಿವ ಅಮಿತ್ ಶಾ ಸೇರಿ 61 ಮಂದಿ ಚರ್ಚೆಯಲ್ಲಿ ಭಾಗಿಯಾದರು. ಮಸೂದೆಯನ್ನು ಸ್ಪೀಕರ್ ಓಂ ಬಿರ್ಲಾ ಮತಕ್ಕೆ ಹಾಕಿದರು. ಗುರುವಾರ ನಸುಕಿನ 1.30ರ ನಂತರವೂ ಕಲಾಪ ಮುಂದುವರಿದಿತ್ತು.