HEALTH TIPS

ಭೋಪಾಲ್

1.04 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಶಿವರಾಜ್ ಸಿಂಗ್ ಚೌವ್ಹಾಣ್

ನವದೆಹಲಿ

ಯಾವುದೇ ಶೀರ್ಷಿಕೆಯಿಲ್ಲ

ನವದೆಹಲಿ

ರಾಜಸ್ಥಾನ ನೂತನ ಸಿಎಂ: ಕೇಂದ್ರ ನಾಯಕರ ಮಾರ್ಗದರ್ಶನದಲ್ಲಿ ಶೀಘ್ರ ಆಯ್ಕೆ- ಜೋಶಿ

12 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ: ಮೂರು ರಾಜ್ಯಗಳಿಗೆ ಕುಸಿದ ಕಾಂಗ್ರೆಸ್ ಆಡಳಿತ

Election Result 2023 Quick Guide: ಅಂತಿಮ ಫಲಿತಾಂಶ ಇಲ್ಲಿದೆ.. 1hr1 shares ಬೆಂಗಳೂರು: 2024 ಲೋಕಸಭೆ ಚುನಾವಣೆಗಳ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದು ಅಧಿಕಾರ ರಚಿಸಲು ಸಿದ್ಧವಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷವು ಒಂದು ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಈ ಫಲಿತಾಂಶದ ವಿಶೇಷವೆಂದರೆ, ಯಾವುದೇ ಪಕ್ಷಾಂತರ, ಆಮಿಷ ಅಥವಾ ಆಪರೇಶನ್ - ಇಲ್ಲದೆಯೇ ಪಕ್ಷಗಳು ಸರಕಾರ ರಚಿಸಲು ಅವಕಾಶವಿದೆ. ಇದುವರೆಗಿನ ಮಾಹಿತಿಯ ಪ್ರಕಾರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ - ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ನಿಶ್ಚಳವಾಗಿದೆ.. ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಹೆಚ್‌ಆರ್‌ಎಸ್) ಆಘಾತ ಅನುಭವಿಸಿದ್ದರೆ ಕಾಂಗ್ರೆಸ್ ಅದ್ಭುತ ಗೆಲುವು ದಾಖಲಿಸಿದೆ. ಇಲ್ಲಿ ಕಾಂಗ್ರೆಸ್ INC 64 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಬಿಆರ್‌ಎಸ್ 39 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದೆ. ಬಿಜೆಪಿ 8 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡರೆ, ಓವೈಸಿ ನೇತೃತ್ವದ ಎಐಎಂಐಎಂ 7ರಲ್ಲಿ ಗೆದ್ದಿದೆ. ಸಿಪಿಐ 1. ಒಟ್ಟು ಸ್ಥಾನ 119, ಬಹುಮತಕ್ಕೆ 60. ಛತ್ತೀಸಗಢದಲ್ಲಿ ಕಾಂಗ್ರೆಸ್ ಪಕ್ಷವು ಅಚ್ಚರಿಯ ಸೋಲು ಕಂಡಿದೆ. ಇಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಬರಬಹುದು ಎಂದಿದ್ದವು. ಆದರೆ ಸಮೀಕ್ಷೆಗಳು ತಲೆಕೆಳಗಾಗಿ ಬಿಜೆಪಿ 54 ರಲ್ಲಿ ಹಾಗೂ ಕಾಂಗ್ರೆಸ್ 36 ರಲ್ಲಿ ಗೆದ್ದಿದೆ. ಜಿಜಿಪಿ1. ಒಟ್ಟು ಸ್ಥಾನ 90, ಬಹುಮತಕ್ಕೆ 46. ರಾಜಸ್ಥಾನದಲ್ಲಿ ಸಂಪ್ರದಾಯದಂತೆ ಈ ಸಾರಿ ಕಾಂಗ್ರೆಸ್ ಬದಲಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. 199 ಸ್ಥಾನಗಳಲ್ಲಿ ಬಿಜೆಪಿ 115, ಕಾಂಗ್ರೆಸ್ 69, ಐಎನ್‌ಡಿ 8, ಭಾರತ್ ಆಧಿವಾಸಿ 3, ಬಿಎಸ್‌ಪಿ 2. ಬಹುಮತಕ್ಕೆ 100. ಮಧ್ಯಪ್ರದೇಶದಲ್ಲಿ ಬಿಜೆಪಿಯು ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 230 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 164 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದೆ. ಕಾಂಗ್ರೆಸ್ 65ರಲ್ಲಿ ಗೆದ್ದರೆ, ಭಾರತ್ ಆದಿವಾಸಿ 1 ಸ್ಥಾನ ಗೆದ್ದಿದೆ. ಬಹುಮತಕ್ಕೆ 116. *ಚುನಾವಣಾ ಆಯೋಗದ ಇತ್ತೀಚಿನ ಮಾಹಿತಿ ಪ್ರಕಾರ.

Beauty

ಪ್ರಪಂಚದಲ್ಲಿಅತ್ಯಂತ ಉದ್ದ ಕೂದಲಿನ ವ್ಯಕ್ತಿ ಎಂದು ರೆಕಾರ್ಡ್ ಮಾಡಿದ ಭಾರತದ ಮಹಿಳೆ, ಇವರ ಕೂದಲಿನ ಉದ್ದ ಎಷ್ಟು ಗೊತ್ತೇ?

HEALTH

ವಿಟಮಿನ್ ಡಿ ಕೊರತೆಯೇ? : ಈ 3 ಅಂಶಗಳತ್ತ ಗಮನಹರಿಸಿದರೆ ವಿಟಮಿನ್ ಡಿ ಹೆಚ್ಚಾಗುತ್ತೆ